ಚಡಾವಾ ಚೋರಿ ಪಾರದರ್ಶಕ ತನಿಖೆಗೆ ವಿಎಚ್‌ಪಿ ಸಂಪೂರ್ಣ ಮುಕ್ತ

ಅಯೋಧ್ಯೆ ಶ್ರೀರಾಮಮಂದಿರದ ಕಾಣಿಕೆ  ಹಣ ಕಳವು ಪ್ರಕರಣ ತೀವ್ರ ಆಘಾತ ತಂದಿದ್ದು, ಈ ಕುರಿತು ಪಾರದರ್ಶಕ ತನಿಖೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಪೂರ್ಣ ಮುಕ್ತವಾಗಿದೆ ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
ಅಯೋಧ್ಯೆ ಶ್ರೀರಾಮಮಂದಿರದ ಕಾಣಿಕೆ ಹಣ ಕಳವು ಪ್ರಕರಣ ತೀವ್ರ ಆಘಾತ ತಂದಿದ್ದು, ಈ ಕುರಿತು ಪಾರದರ್ಶಕ ತನಿಖೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಪೂರ್ಣ ಮುಕ್ತವಾಗಿದೆ ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
Published on

ಮಂಗಳೂರು: ಅಯೋಧ್ಯೆ ಶ್ರೀರಾಮಮಂದಿರದ ಕಾಣಿಕೆ ಹಣ ಕಳವು ಪ್ರಕರಣ ತೀವ್ರ ಆಘಾತ ತಂದಿದ್ದು, ಈ ಕುರಿತು ಪಾರದರ್ಶಕ ತನಿಖೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಪೂರ್ಣ ಮುಕ್ತವಾಗಿದೆ ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಚಾರ ಬೆಳಕಿಗೆ ಬಂದ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ವಿಎಚ್‌ಪಿ ಒತ್ತಾಯಿಸಿದ್ದು, ಸ್ವತಃ ಎಫ್‌ಐಆರ್ ದಾಖಲಿಸಿದೆ. ತನಿಖೆಗಾಗಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚನೆಗೆ ಮನವಿ ಮಾಡಲಾಗಿದ್ದು, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪಾರದರ್ಶಕವಾಗಿ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಸದಸ್ಯ ಅನಿಲ್ ಮಿಶ್ರಾ ಅವರು ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 2026 ರ ಅಂತ್ಯದ ವೇಳೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.
*ಆಧುನಿಕ ಆಡಳಿತ ಮಂಡಳಿ ಹಾಗೂ ಸಿಇಒ ನೇಮಕ
ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು ವೃತ್ತಿಪರ ದೇವಸ್ಥಾನ ಆಡಳಿತ ಅನುಭವವಿರುವ ಮುಖ್ಯ ನಿರ್ವಹಣಾಧಿಕಾರಿ (ಸಿಇಒ) ನೇಮಕ ಮಾಡಲಾಗುವುದು. ಆಧುನಿಕ ತಂತ್ರಜ್ಞಾನ ಹಾಗೂ ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಿಇಒ ಹುದ್ದೆಗೆ ದೇಶದ ನಾನಾ ಭಾಗಗಳಿಂದ 5,000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಮುಖರಾದ ಎಚ್.ಕೆ ಪುರುಷೋತ್ತಮ, ಶರಣ್‌ಪಂಪ್ವೇಲ್, ಬುಜಂಗ ಕುಲಾಲ್, ಎಂಬಿ ಪುರಾಣಿಕ್ ಮತ್ತಿತರಿದ್ದರು.
----------------------
ಸಾಧು-ಸಂತರ ನಿಂದನೆಗೆ ವಿಪಕ್ಷಗಳಿಗೆ ಎಚ್ಚರಿಕೆ
ಸಂಸದ್ ಭವನದ ಎದುರು ಸಾಧು ವೇಷಧರಿಸಿ ಸಂಸದ ಪಪ್ಪು ಯಾದವ್ ಹಾಗೂ ವಿಪಕ್ಷ ನಾಯಕರು ನಡೆಸಿದ ಚಡಾವಾ ಚೋರಿ ಪ್ರತಿಭಟನೆಯನ್ನು ವಿಎಚ್‌ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತೀವ್ರವಾಗಿ ಖಂಡಿಸಿದರು. ಭಗವಾ ವಸ್ತ್ರ ಮತ್ತು ಸಂತ ಸಮುದಾಯಕ್ಕೆ ಅಪಮಾನ ಎಸಗುವ ಮೂಲಕ ವಿಪಕ್ಷಗಳು ಮಿತಿಮೀರಿ ವರ್ತಿಸುತ್ತಿವೆ. ಆರಂಭದಿಂದಲೂ ಶ್ರೀರಾಮಮಂದಿರ ಹೋರಾಟವನ್ನು ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರು, ಈಗ ಇಡೀ ಸಂತ ಸಮುದಾಯವನ್ನು ‘ಚೋರ್’ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಸನಾತನ ಧರ್ಮ ಮತ್ತು ಸಂತರ ನಿಂದನೆಯನ್ನು ದೇಶದ ಜನರು ಗಮನಿಸುತ್ತಿದ್ದು, ಮುಂಬರುವ ಚುನಾವಣೆಗಳಲ್ಲಿ ಈ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.
----------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net