

ವಿಜಯವಣಿ ಸುದ್ದಿಜಾಲ ಕುಂದಾಪುರ
ನಮ್ಮ ಜಿಲ್ಲೆಗೆ ಲಾಭವಾಗುವ ಅನೇಕ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರಿಕೊಂಡಿದೆ. ಶಾಲಾ ಕಟ್ಟಡ, ವಾಚನಾಲಯ, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬಹುದು. 60:40 ಅನುಪಾತ ಪಾಲಿಸುವುದು ಸ್ವಲ್ಪ ಕಷ್ಟವಾಗುತ್ತಿದೆ. ಕೆಲವು ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಇಟ್ಟಿದ್ದರೆ, ಕೆಲವು ಕಾಮಗಾರಿಗಳಿಗೆ ಕಡಿಮೆ ಮಾಡಲಾಗಿದೆ. ವೈಯಕ್ತಿಕ ಕಾಮಗಾರಿಗಳಿಗೆ ಎನ್‌ಎನ್‌ಎಂಎಸ್ ಆ್ಯಪ್ ತಂದಿರುವುದರಿಂದ ಸ್ವಲ್ಪ ಹೊಡೆತ ಬೀಳಲಿದೆ.
— ವಿಜಯ ಶ್ಯಾಮ್ ಜಿಪಂ ಸಹಾಯಕ ನಿರ್ದೇಶಕ
ಈ ವರ್ಷ ಕ್ರಿಯಾ ಯೋಜನೆ ಬಹಳಷ್ಟು ತಡವಾಗಿ ಮಂಜೂರಾತಿ ಆಗಿದೆ. ನರೇಗಾದ ಕಾಮಗಾರಿ ಮುಂದುವರಿಸಲಾಗಿದೆ. ನರೇಗಾದಲ್ಲಿ 266 ಕಾಮಗಾರಿಗಳಿದ್ದು, ವಿಬಿಜಿ 318 ಕಾಮಗಾರಿಗಳನ್ನು ನೀಡಲಾಗಿದೆ. ಕೈಬಿಡಲಾದ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಗುರುತು ಮಾಡಿ ಕ್ರಿಯಾ ಯೋಜನೆ ತಯಾರಿಸಬೇಕಿದ್ದು, ಡಿಸೆಂಬರ್ ವೇಳೆಗೆ ಇದು ಇನ್ನಷ್ಟು ಉತ್ತಮಗೊಳ್ಳಬಹುದು.
— ಸುರೇಶ ಸಹಾಯಕ ನಿರ್ದೇಶಕ