ವರ್ಮುಡಿ ಕೃತಿ ಅಡಕೆ ಬೆಳೆಗಾರರಿಗೆ ಮಾರ್ಗದರ್ಶಕ Varmudy

ಅಡಕೆ ಮಾರುಕಟ್ಟೆ ಸ್ಥಿತಿ-ಗತಿ ಕೃತಿಯನ್ನು ಶಂ.ನಾ.ಖಂಡಿಗೆ ಲೋಕಾರ್ಪಣೆ ಮಾಡಿದರು. ಡಾ. ವಿಘ್ನೇಶ್ವರ ವರ್ಮುಡಿ, ರಾಘವ ಸಾರಡ್ಕ, ಪದ್ಮರಾಜ್ ಪಟ್ಟಾಜೆ, ಪಡಾರು ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
ಅಡಕೆ ಮಾರುಕಟ್ಟೆ ಸ್ಥಿತಿ-ಗತಿ ಕೃತಿಯನ್ನು ಶಂ.ನಾ.ಖಂಡಿಗೆ ಲೋಕಾರ್ಪಣೆ ಮಾಡಿದರು. ಡಾ. ವಿಘ್ನೇಶ್ವರ ವರ್ಮುಡಿ, ರಾಘವ ಸಾರಡ್ಕ, ಪದ್ಮರಾಜ್ ಪಟ್ಟಾಜೆ, ಪಡಾರು ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಂ.ನಾ.ಖಂಡಿಗೆ ಹೇಳಿಕೆ
ವಿಟ್ಲ: ಅಡಕೆಯನ್ನು ಅವಲಂಬಿತರು ವರ್ಮುಡಿಯವರ ಕೃತಿಯನ್ನು ಓದುವ ಅಗತ್ಯವಿದೆ. ಈ ಮೂಲಕ ಈಗಿನ ಸ್ಥಿತಿ ಮತ್ತು ಮುಂದಿನ ಗತಿ ಬಗ್ಗೆ ಅರಿತುಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕ ಶಂ.ನಾ.ಖಂಡಿಗೆ ಹೇಳಿದರು.
ಸಾರಡ್ಕದಲ್ಲಿ ಡಾ.ವರ್ಮುಡಿ ಅವರ ಅಡಕೆ ಮಾರುಕಟ್ಟೆ ಸ್ಥಿತಿ-ಗತಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ, ಅಡಕೆ ಧಾರಣೆ ಆಗಿಂದಾಗ್ಗೆ ಏರಿಳಿತಕ್ಕೆ ಒಳಪಡುತ್ತಿದೆ. ೨೦೨೦ರ ಮೊದಲು ಈ ಪ್ರವೃತಿಯ ಅವಽ ಸುಮಾರು ಒಂದರಿಂದ ಒಂದೂವರೆ ತಿಂಗಳು ಇದ್ದರೆ ಇತ್ತೀಚೆಗೆ ಈ ಅವಽ ಹತ್ತರಿಂದ ಹದಿನೈದು ದಿನಕ್ಕಿಳಿದಿದೆ. ಅಡಕೆ ಧಾರಣೆ ಹೆಚ್ಚಿದಂತೆ ಹಣಕಾಸಿನ ಚಲಾವಣೆಯ ವೇಗ ಕುಂಠಿತಗೊಳ್ಳುವುದು ಮುಖ್ಯ ಕಾರಣವಾಗಿದೆ. ಇದರೊಂದಿಗೆ ಆಮದು ಹಾಗೂ ಆಂತರಿಕ ಮತ್ತು ಬಾಹ್ಯ ನೀತಿಗಳು ಕೂಡ ಅಲ್ಪಪ್ರಮಾಣದ ಪ್ರಭಾವ ಬೀರುತ್ತವೆ ಎಂದರು.
ಕೇಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಘವ ಸಾರಡ್ಕ, ಕ್ಯಾಂಪ್ಕೊ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ಪಡಾರು ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net