ಪ್ರಕರಣದಲ್ಲಿ ಕುಶಾಲನಗರ ಸುಲೈಮಾನ್ ಅಲಿಯಾಸ್ ಸಮೀರ್ (38) ಮತ್ತು ಮೊಹಮ್ಮದ್ ನಿಯಾಜ್ (29) ಎಂಬವರು ಆರೋಪಿಗಳಾಗಿದ್ದರು. ಈ ಪೈಕಿ ಸಮೀರ್ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ನಿಯಾಜ್ ಮಾತ್ರ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದ. ನ್ಯಾಯಾಲಯ ಆತನನ್ನು ದೋಷಿ ಎಂದು ತೀರ್ಮಾನಿಸಿದ್ದು, ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಾಗಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.