ನೀರಿನ ಬಾಟಲಿಗೆ ಮೂತ್ರ ವಿಸರ್ಜನೆ

Crime
Crime
Published on

ಕಾಸರಗೋಡು: ನೆಕ್ರಾಜೆ ನಿವಾಸಿ, 30ರ ಹರೆಯದ ಮಹಿಳೆಯೊಬ್ಬರ ಕುಡಿಯುವ ನೀರಿನ ಬಾಟಲಿಗೆ ಇಬ್ಬರು ಸಹೋದ್ಯೋಗಿಗಳು ಮೂತ್ರ ವಿಸರ್ಜನೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೊಗ್ರಾಲ್‌ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ವೈಶಾಖ್ ಹಾಗೂ ಎಬಿನ್ ಆರೋಪಿಗಳು. ಜು.25ರ ಸಂಜೆ 5 ಗಂಟೆಯಿಂದ ಜು.27ರ ಬೆಳಗ್ಗೆ 9.30ರೊಳಗಿನ ಕಾಲಾವಧಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಕುಡಿಯಲು ಬಳಸುತ್ತಿದ್ದ ನೀರಿನ ಬಾಟಲಿಯನ್ನು ಸಂಸ್ಥೆಯ ಕಚೇರಿಯ ಕ್ಯಾಬಿನ್‌ನಲ್ಲಿ ಇರಿಸಿದ್ದು, ಇದಕ್ಕೆ ಆರೋಪಿಗಳು ಮೂತ್ರ ವಿಸರ್ಜನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net