ಕಾಲುಸಂಕ ತುರ್ತು ಅಗತ್ಯ

 ಆಜ್ರಿ ಗ್ರಾಪಂ ವ್ಯಾಪ್ತಿಯ ಕ್ಯಾಕೋಡುವಿನಲ್ಲಿ ನಿನಿರ್ಮಾಣವಾದ ನೂತನ ಕಾಲುಸಂಕವನ್ನು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ಶ್ರೀಕಾಂತ್, ಎಸ್.ಎಸ್.ಶ್ರೀಕಾಂತ್, ಮುರುಳಿ, ಬಾಲಚಂದ್ರ ಭಟ್ ಮತ್ತಿತರರಿದ್ದರು.
ಆಜ್ರಿ ಗ್ರಾಪಂ ವ್ಯಾಪ್ತಿಯ ಕ್ಯಾಕೋಡುವಿನಲ್ಲಿ ನಿನಿರ್ಮಾಣವಾದ ನೂತನ ಕಾಲುಸಂಕವನ್ನು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ಶ್ರೀಕಾಂತ್, ಎಸ್.ಎಸ್.ಶ್ರೀಕಾಂತ್, ಮುರುಳಿ, ಬಾಲಚಂದ್ರ ಭಟ್ ಮತ್ತಿತರರಿದ್ದರು.
Published on
ಬೈಂದೂರು: ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಲುಸಂಕಗಳ ತುರ್ತು ಅಗತ್ಯವಿದೆ. ಸರ್ಕಾರದಿಂದ ಕಾಲುಸಂಕ ನಿರ್ಮಾಣ ಒಂದು ಭಾಗವಾದರೆ ಸಮೃದ್ಧ ಬೈಂದೂರು ಹಾಗೂ ಅರುಣಾಚಲಂ ಟ್ರಸ್ಟ್ ಒಡಂಬಡಿಕೆಯೊಂದಿಗೆ ಕೆಲವು ಕಡೆಗಳಲ್ಲಿ ಕಾಲುಸಂಕಗಳನ್ನು ವಿನೂತನ ಆವಿಷ್ಕಾರದೊಂದಿಗೆ ನಿರ್ಮಿಸಲಾಗುತ್ತದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಆಜ್ರಿ ಗ್ರಾಪಂ ವ್ಯಾಪ್ತಿಯ ಕ್ಯಾಕೋಡುವಿನಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆಯ ಅರುಣಾಚಲಂ ಕಾಲುಸಂಕ ಯೋಜನೆಯಲ್ಲಿ ಬೆಂಗಳೂರಿನ ಸಮ್ಯತ ಫೌಂಡೇಶನ್ ಸಹಕಾರದೊಂದಿಗೆ ಇಂಡಸ್ 555 ಟಿಎಂಟಿ ಅವರ ಸಿಎಸ್‌ಆರ್ ನಿಧಿಯಿಂದ ನಿರ್ಮಾಣವಾದ ನೂತನ ಕಾಲುಸಂಕ ಉದ್ಘಾಟಿಸಿ ಮಾತನಾಡಿದರು.
ಇಂಡಸ್ ಸಂಸ್ಥೆ ವಾಲೀಕ ಶ್ರೀಕಾಂತ್, ಟಿಎಂಟಿ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಶ್ರೀಕಾಂತ್, ಸಮ್ಯತ ಫೌಂಡೇಶನ್ ಸಂಸ್ಥಾಪಕ ಮುರುಳಿ, ಪ್ರಮುಖರಾದ ಬಾಲಚಂದ್ರ ಭಟ್, ಸುಭಾಷ್ ಶೆಟ್ಟಿ ಕೊಡ್ಲಾಡಿ, ಪ್ರದೀಪ್ ಹೆಗ್ಡೆ, ಮೂರ್ತಿ ಶೆಟ್ಟಿ, ಪ್ರಾಣೇಶ್ ಯಡಿಯಾಳ್ ಉಪಸ್ಥಿತರಿದ್ದರು. ವಿದ್ಯಾಧರ್ ಶೆಟ್ಟಿ ಕೊಡ್ಲಾಡಿ ಸ್ವಾಗತಿಸಿದರು. ವೇಣುಗೋಪಾಲ್ ಶೆಟ್ಟಿ ಆಜ್ರಿ ವಂದಿಸಿದರು. ಸುದೀಪ್ ಶೆಟ್ಟಿ ನಿರೂಪಿಸಿದರು.

ಬೈಂದೂರು ಕ್ಷೇತ್ರದ ಹಲವಾರು ಕಡೆಗಳಲ್ಲಿ ಜನರು ಕಳೆದ ಹಲವು ವರ್ಷಗಳಿಂದ ಮೂಲಭೂತ ಸಮಸ್ಯೆಗಳಿಂದ ಯಾತನಾಮಯ ಬದುಕು ಸಾಗಿಸುತ್ತಿದ್ದಾರೆ. ಕೃಷಿ, ಕೂಲಿ ನಂಬಿಕೊಂಡಿರುವ ಹಳ್ಳಿಯ ಹತ್ತಾರು ಕುಟುಂಬಗಳು ದೈನಂದಿನ ವ್ಯವಹಾರಗಳಿಗೆ ಹತ್ತಿರದ ಪೇಟೆಗೆ ತೆರಳಬೇಕು. ಅವರಿಗೆ ಬೇಸಿಗೆಯಲ್ಲಿ ಸಮಸ್ಯೆಯಿಲ್ಲದಿದ್ದರೂ ಮಳೆಗಾಲದ ಪರಿಸ್ಥಿತಿ ಹೇಳತೀರದಾಗಿದೆ. ಈ ಪ್ರದೇಶಕ್ಕೆ ಸಂಪರ್ಕ ಸೇತುವೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿವರ್ಷ ಮಳೆಗಾಲದಲ್ಲಿ ಕಾಲುಸಂಕ ಅವಲಂಬಿಸಬೇಕಾಗಿದೆ. ಪ್ರಸ್ತುತ ಸೇತುವೆ ಹಾಗೂ ಕಾಲುಸಂಕಗಳಿಗೆ ಅನುದಾನದ ಕೊರತೆ ಹಾಗೂ ಶ್ರೀ ಮಂಜೂರಾತಿ ಸಮಸ್ಯೆ ಇದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net