ಕೃಷಿ ಭೂಮಿಗೆ ಕೊಳಚೆ ನೀರು UPPINANGADY

ಚರಂಡಿಯಲ್ಲಿ ನೀರು ಹರಿಯದೆ ಕೃಷಿ ಜಮೀನಿಗೆ ನುಗ್ಗಿರುವುದು.
ಚರಂಡಿಯಲ್ಲಿ ನೀರು ಹರಿಯದೆ ಕೃಷಿ ಜಮೀನಿಗೆ ನುಗ್ಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಉಪ್ಪಿನಂಗಡಿಯಲ್ಲಿ ರಾಜಕಾಲುವೆ, ಚರಂಡಿಗೆ ಮಣ್ಣು ಹಾಕಿ ಸಮಸ್ಯೆ ಸೃಷ್ಟಿ
  • ಕೃಷಿಕರು, ಶಾಲಾ ಮಕ್ಕಳಿಗೆ ಸಮಸ್ಯೆ
  • ಸೊಳ್ಳೆ ಉತ್ಪಾದನಾ ತಾಣವಾಗಿ ಪರಿವರ್ತನೆ
  • ಅಧಿಕಾರಿಗಳ ನಿರ್ಲಕ್ಷ್ಯ ಧೋಣೆಗೆ ಸಾರ್ವಜನಿಕರ ಆಕ್ರೋಶ
ಪುತ್ತೂರು: ರಾಜಕಾಲುವೆ ಹಾಗೂ ಸಾರ್ವಜನಿಕ ದಾರಿಗಳನ್ನು ಮುಚ್ಚುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ, ಕಾನೂನು ಕ್ರಮಕ್ಕೆ ಮುಂದಾಗಬೇಕಾದ ಅಧಿಕಾರಿಗಳು ದೂರು ಅರ್ಜಿಯನ್ನು ಕಚೇರಿಯಿಂದ ಕಚೇರಿಗೆ ರವಾನಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೋಗದೆ ಎಂದರಲ್ಲಿ ನುಗ್ಗಿ ಹಾನಿ ಮಾಡುತ್ತಿದ್ದು, ಸ್ಥಳೀಯ ಕೃಷಿಕರು ಕಂಗಾಲಾಗಿದ್ದಾರೆ.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೇದಶಂಕರ ನಗರದಲ್ಲಿ ಹರಿಯುವ ಚರಂಡಿಯನ್ನು ಮಣ್ಣು ಹಾಕಿ ಮುಚ್ಚಿದರೂ ಕೇಳುವವರಿಲ್ಲದಂತಾಗಿದೆ. ಶ್ರೀರಾಮ ಶಾಲೆ ಸಂಪರ್ಕದ ಒಂದು ಪಾರ್ಶ್ವದಲ್ಲಿರುವ ವಸತಿಸಮುಚ್ಚಯಗಳ ಪೈಕಿ, ಒಂದು ನಿವೇಶನದವರು ಮಳೆ ನೀರು ಹರಿಯುವ ಚರಂಡಿಗೆ ಅವೈಜ್ಞಾನಿಕವಾಗಿ ಮಣ್ಣು ತುಂಬಿದ್ದಾರೆ.
ಕೃಷಿಭೂಮಿಗೆ ನುಗ್ಗಿದ ನೀರು: ಮಳೆ ನೀರು ಸರಿಯಾಗಿ ಹರಿದು ಹೋಗದೆ ಅಕ್ಕಪಕ್ಕದ ನಿವೇಶನಗಳಿಗೆ ಹಾಗೂ ಸಾರ್ವಜನಿಕರ ಕೃಷಿ ಭೂಮಿಯಲ್ಲಿ ನಿಂತು ಸಮಸ್ಯೆಯನ್ನುಂಟು ಮಾಡುತ್ತಿದೆ. ಕೃಷಿಗೆ ಹಾನಿಯಾಗುವ ಜತೆಗೆ ಪ್ರದೇಶವು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಯಾದರೂ ಅಽಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ವಿವಿಧ ಇಲಾಖೆಗಳಿಗೆ ದೂರು ನೀಡಿದರೂ ಅಽಕಾರಿಗಳು ನಿರ್ಲಕ್ಷ್ಯ ವಹಿಸಿzರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶಾಲೆಯ ಸಮೀಪವೇ ನೀರು ನಿಂತು ಹಳ್ಳ ನಿರ್ಮಾಣವಾಗಿರುವುದು.

ಶಾಲಾ ಮಕ್ಕಳಿಗೂ ತಪ್ಪದ ಸಂಕಷ್ಟ: ಮಳೆ ಬಿರುಸುಗೊಂಡಾಗ ಮಳೆ ನೀರು ರಸ್ತೆಯ ಹರಿಯುತ್ತಿದ್ದು, ವಾಹನಗಳ ಸಂಚರಿಸುವಾಗ ವಿದ್ಯಾರ್ಥಿಗಳಿಗೆ ನೀರು ಹಾರುತ್ತದೆ. ಕೆಲವು ಕಡೆಗಳಲ್ಲಿರುವ ಹಳ್ಳಗಳಲ್ಲಿ ನೀರು ತುಂಬಿ ಅಪಾಯ ಆಹ್ವಾನಿಸುವ ಸಾಧ್ಯತೆಯಿದೆ. ಶಾಲೆಯ ಸಮೀಪದ ಇಂತಹ ಅವ್ಯವಸ್ಥೆಯಿದ್ದರೂ ಸ್ಥಳೀಯಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ಅಧಿಕಾರಿಗಳಿಗೆ ದೂರು: ಪಾಲಾಶತಡ್ಕ, ನೆಟ್ಟಿಬೈಲು ಹಾಗೂ ಹರಿ ನಗರಕ್ಕೆ ಹೋಗುವ ದಾರಿಯ ನೀರು ಮೋರಿಯ ಮೂಲಕ ಹರಿದು ಶ್ರೀರಾಮ ಶಾಲೆಯ ಬಳಿಯಿಂದ ಕುಮಾರಧಾರಾ ನದಿಗೆ ಸೇರುತ್ತದೆ. ಅನಾದಿ ಕಾಲದಿಂದಲೂ ನೀರು ಹರಿಯುತ್ತಿದ್ದ ಕಾಲುವೆ ಕೆಲವು ಸಮಯದಿಂದ ನಾಪತ್ತೆಯಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ.
ನೆಟ್ಟಿಬೈಲು ನಿವಾಸಿಗಳು ಕೃಷಿ ಜಮೀನಿಗೆ ಹಾಗೂ ಮನೆಗಳ ಒಳಗೆ ನೀರು ನುಗ್ಗುತ್ತಿರುವ ಬಗ್ಗೆ ಜಿಽಕಾರಿ, ಪುತ್ತೂರು ತಹಸೀಲ್ದಾರ್ ಹಾಗೂ ಸ್ಥಳೀಯ ಪಂಚಾಯಿತಿಗೆ ದೂರು ನೀಡಿzರೆ. ಆದರೆ ದೂರು ಕಚೇರಿಯಿಂದ ತಳಮಟ್ಟಕ್ಕೆ ತಲುಪಿ ಕ್ರಮ ಕೈಗೊಳ್ಳುವಷ್ಟರಲ್ಲಿ ಸಂತ್ರಸ್ತರ ಪರಿಸ್ಥಿತಿ ಶೋಚನೀಯವಾಗಲಿದೆ. ಅಽಕಾರಿಗಳು ಕಚೇರಿಯಿಂದ ಹೊರಬಂದು ಪರಿಶೀಲನೆ ನಡೆಸದಿರುವುದೇ ದೊಡ್ಡ ಸಮಸ್ಯೆಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ

ಸಭೆಗಳಲ್ಲಿ ಭಾಗವಹಿಸುವ ಅಧಿಕಾರಿಗಳು ಅಲ್ಲಿ ನೀಡುವ ಸಲಹೆ-ಸೂಚನೆಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಕಣಿಗಳನ್ನು ಮುಚ್ಚುವಾಗಲೇ ಜನರು ದೂರು ನೀಡಿದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೆಲವು ಮನೆಮಂದಿ ರಾತ್ರಿ ವೇಳೆ ನಿದ್ರೆಬಿಟ್ಟು ಕೂರುವ ಸ್ಥಿತಿ ನಿರ್ಮಾಣವಾಗಿದೆ.
"

ನಿವೇಶನ ಮಾಲೀಕರಿಗೆ ಮಣ್ಣು ಸುರಿಯುವಾಗಲೇ ಸಮಸ್ಯೆ ಉದ್ಭವಿಸುವ ಬಗ್ಗೆ ತಿಳಿಹೇಳಲಾಗಿತ್ತು. ಆದರೂ ಮಣ್ಣು ಹಾಕಿ ಈಗ ಕೃಷಿ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಯನ್ನು ಅಧಿಕಾರಿಗಳು ತ್ವರಿತವಾಗಿ ತೆರವುಗೊಳಿಸದಿದ್ದರೆ ಇನ್ನಷ್ಟು ನಷ್ಟ ಸಂಭವಿಸಲಿದೆ.

— ಜ್ಯೋತಿ, ಸಂತ್ರಸ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net