

ಪುತ್ತೂರು ಗ್ರಾಮಾಂತರ: ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಸಂಘದ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ರೈತರಿಗೆ ಅನುಕೂಲತೆ ಕಲ್ಪಿಸುವ ದೃಷ್ಟಿಯಿಂದ ಸಮಿತಿ ರಚಿಸಿ, ರೈತ ಸಮಸ್ಯೆಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಬೇಡಿಕೆಯಂತೆ ರಿಯಾಯಿತಿ ದರದಲ್ಲಿ ರಸಗೊಬ್ಬರಗಳ ಸರಬರಾಜು ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಹೇಳಿದರು.
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುಳ್ಯಪದವು ಶಾಖೆಯ ನೂತನ ಕಟ್ಟಡಕ್ಕೆ ಸ್ಥಳ ದಾನ ಮಾಡಿರುವ ದಿ.ಅಚ್ಚುತ ಭಟ್ ಅವರ ಭಾವಚಿತ್ರ ಅನಾವರಣ, ಸ್ಥಳ ದಾನಿಗಳಿಗೆ ಸನ್ಮಾನ, ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಹಕರಿಸಿದ್ದ ಸಂಘ-ಸಂಸ್ಥೆಗಳಿಗೆ ಸಂಘದ ಸುಳ್ಯಪದವು ಶಾಖೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳದಾನಿ ವಿಶಾಲಾಕ್ಷಿ ಅಮ್ಮ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಬೀರಮೂಲೆ ಸೂರ್ಯನಾರಾಯಣ ಭಟ್ ಮಾತನಾಡಿದರು. ಬಡಗನ್ನೂರು ಗ್ರಾಪಂ ಸದಸ್ಯರಾದ ವೆಂಕಟೇಶ್ ಕೆ., ಶ್ರೀಮತಿ ಕೆ., ಸಂಘದ ನಿರ್ದೇಶಕರಾದ ಶಿವರಾಮ್ ಬೊಳ್ಳಾಡಿ, ಶ್ರೀನಿವಾಸ್ ಪ್ರಸಾದ್ ಮುಡಾಲ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಭವಾನಿ ಸ್ವಾಗತಿಸಿದರು. ನಿರ್ದೇಶಕ ಅಮರನಾಥ ರೈ ವಂದಿಸಿದರು. ಶಿಕ್ಷಕ ರಾಜೇಶ್ ಎಂ. ಕಾರ್ಯಕ್ರಮ ನಿರೂಪಿಸಿದರು.