ಲೇಡಿಗೋಷನ್ ಆಸ್ಪತ್ರೆಗೆ ಎಚ್.ಪಿ.ಸಿ.ಎಲ್.ನಿಂದ ಅಲ್ಟ್ರಾಸೌಂಡ್ ಕೊಡುಗೆ

ಅಲ್ಟ್ರಾಸೌಂಡ್ ಉಪಕರಣ ವಿತರಣೆ ಸಂದರ್ಭ ಡಾ.ದುರ್ಗಾಪ್ರಸಾದ್ ಎಂ.ಆರ್., ಡಾ.ಅಶ್ಫಾಕ್ ಆಲಿ, ಅಜಿತ್ , ದಿನೇಶನ್, ಅಶೀಶ್ ಅಭಿಮನ್ಯು ಮೊದಲಾದವರಿದ್ದರು.
ಅಲ್ಟ್ರಾಸೌಂಡ್ ಉಪಕರಣ ವಿತರಣೆ ಸಂದರ್ಭ ಡಾ.ದುರ್ಗಾಪ್ರಸಾದ್ ಎಂ.ಆರ್., ಡಾ.ಅಶ್ಫಾಕ್ ಆಲಿ, ಅಜಿತ್ , ದಿನೇಶನ್, ಅಶೀಶ್ ಅಭಿಮನ್ಯು ಮೊದಲಾದವರಿದ್ದರು.
Published on
ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಸುಮಾರು 25 ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಉಪಕರಣವನ್ನು ಸಿ.ಎಸ್.ಆರ್ . ಅನುದಾನದಿಂದ ಕೊಡುಗೆಯಾಗಿ ನೀಡಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಮಾತನಾಡಿ, ತಾಯಿ ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಿನಂಪ್ರತಿ 130ಕ್ಕಿಂತಲೂ ಹೆಚ್ಚು ಸ್ಕಾೃನಿಂಗ್‌ಗಳು ನಡೆಯುತ್ತಿದ್ದು ಗುಣಮಟ್ಟದ ಸೇವೆಯನ್ನು ಜನತೆಗೆ ನೀಡಲು ಇದು ಸಹಕಾರಿಯಾಗಲಿದೆ ಎಂದರು.
ಉಪಕರಣದ ಅನಾವರಣ ಮಾಡಿದ ಕೆ.ಎಂ.ಸಿ . ಅಸೋಸಿಯೇಟ್ ಡೀನ್ ಡಾ.ಅಶ್ಫಾಕ್ ಆಲಿ ಅವರು, ಕೆ.ಎಂ.ಸಿ ಹಾಗೂ ಸರ್ಕಾರಿ ಸಹಭಾಗಿತ್ವದಿಂದ ನಡೆಯುತ್ತಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ವಿಶೇಷ ಅರ್ಥವಿದೆ ಎಂದರಲ್ಲದೆ ಹೆಚ್.ಪಿ.ಸಿ.ಎಲ್.ಕೊಡಮಾಡಿದ ಈ ಉಪಕರಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ ಎಂಬ ಭರವಸೆಯನ್ನು ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್.ಪಿ.ಸಿ.ಎಲ್.ಜನರಲ್ ಮ್ಯಾನೇಜರ್ ಅಜಿತ್ ಅವರು, ಲೇಡಿಗೋಷನ್ ಆಸ್ಪತ್ರೆಯ ವಿಸ್ತಾರವಾದ ಸೇವೆಯನ್ನು ಶ್ಲಾಘಿಸಿದರು. ಮುಂದಿನ ಹಂತಗಳಲ್ಲಿ ಮತ್ತಷ್ಟು ಅನುದಾನವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಹೆಚ್.ಪಿ.ಸಿ.ಎಲ್ ನ ದಿನೇಶನ್, ಅಶೀಶ್ ಅಭಿಮನ್ಯು, ಮೊಹಮ್ಮದ್ ಕಾಸಿಂ,ದ್ಯಾವರಿ ಭರತ್ ಕುಮಾರ್,ಕೆ.ಎಂ.ಸಿ.ಯಿಂದ ಡಾ.ನಿಖಿಲ್ ಶೆಟ್ಟಿ,ಡಾ.ಸುಪ್ರಸನ್ನ,ಡಾ.ಶ್ವೇತಾ ಪೂಜಾರಿ, ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್ ಉಪಸ್ಥಿತರಿದ್ದರು.
ಅಂಬಿಕಾ ಮತ್ತು ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಲವೀನಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net