ಸುಳ್ಯದಲ್ಲಿ ಸುಳ್ಯೋತ್ಸವ ಸಂಭ್ರಮ

ಸುಳ್ಯೋತ್ಸವವನ್ನು ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿದರು. ಡಾ.ಕೆ.ವಿ.ಚಿದಾನಂದ, ಅಕ್ಷಯ್.ಕೆ.ಸಿ.ಮೊದಲಾದವರಿದ್ದರು.
ಸುಳ್ಯೋತ್ಸವವನ್ನು ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿದರು. ಡಾ.ಕೆ.ವಿ.ಚಿದಾನಂದ, ಅಕ್ಷಯ್.ಕೆ.ಸಿ.ಮೊದಲಾದವರಿದ್ದರು.
Published on

ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ದೇವಸ್ಥಾನದ ಮುಂಭಾಗದ ಕಲಾವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ.ಸಾರಥ್ಯದಲ್ಲಿ 3ನೇ ವರ್ಷದ ಸುಳ್ಯೋತ್ಸವ ನಡೆಯಿತು.

ಸುಳ್ಯೋತ್ಸವದಲ್ಲಿ ಖ್ಯಾತ ಕಲಾವಿದರು, ಕಲಾ ತಂಡಗಳ ವತಿಯಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಿತು. ಮೊದಲ ದಿನ ಲೋಕ ಏರಿಯಲ್ ಡಾನ್ಸ್ ತಂಡ ಬೆಂಗಳೂರು, ಸ್ವಾಹ ವಿಶುವಲ್ ಆರ್ಟ್ಸ್ ಬೆಂಗಳೂರು, ಡಿ-ಯುನೈಟೆಡ್ ಸುಳ್ಯ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸುಳ್ಯ, ನೃತ್ಯ ಸಾರಂಗ ಕಲಾಕುಟೀರ ಗುತ್ತಿಗಾರು ಮತ್ತಿತರ ತಂಡಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಏರಿಯಲ್ ಸಿಲ್ಕ್, ಫೈರ್ ಡ್ಯಾನ್ಸ್, ಬಾಲಿವುಡ್, ಭರತನಾಟ್ಯ, ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ನಮ್ಮ ಕಲಾವಿದೆರ್ ಬೆದ್ರ ಅವರಿಂದ ವೈರಲ್ ವೈಶಾಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು.

ಚೆನ್ನಕೇಶವ ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಅಕ್ಷಯ್ ಕೆ.ಸಿ.ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಖ್ಯಾತಿಯ ವಂಶಿ ಅವರಿಗೆ ‘ರೈಸಿಂಗ್ ಸ್ಟಾರ್’ ಅವಾರ್ಡ್ ನೀಡಿ ಗೌರವಿಸಲಾಯಿತು. ಆರ್‌ಜೆ ತ್ರಿಶೂಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net