ಅಂಗವಿಕಲರ ಬಗ್ಗೆ ವಿಶೇಷ ಕಾಳಜಿ : ಉಜಿರೆ ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ ಮಾಹಿತಿ

ಉಜಿರೆ ಗ್ರಾಮ ಪಂಚಾಯಿತಿ ವಿಶೇಷಚೇತನರ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ ಅಧ್ಯಕ್ಷತೆಯಲ್ಲಿ ನಡೆಯಿತು.
ಉಜಿರೆ ಗ್ರಾಮ ಪಂಚಾಯಿತಿ ವಿಶೇಷಚೇತನರ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ ಅಧ್ಯಕ್ಷತೆಯಲ್ಲಿ ನಡೆಯಿತು.
Published on
ಉಜಿರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 128 ಮಂದಿ ಗುರುತಿನ ಚೀಟಿ ಪಡೆದ ಅಂಗವಿಕಲರಿದ್ದು, ಅವರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಪುನರ್ವಸತಿ ಕಾರ್ಯಕರ್ತ ವಿಪುಲ್ ಅವರ ಮೂಲಕ ಪೂರಕ ಕೆಲಸ ಮಾಡಲಾಗುತ್ತಿದೆ. ಅವರೆಲ್ಲರ ಬಗ್ಗೆ ವಿಶೇಷ ಕಾಳಜಿಯನ್ನು ಗ್ರಾಮ ಪಂಚಾಯಿತಿ ಹೊಂದಿದೆ ಎಂದು ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ ಹೇಳಿದರು.
ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಉಜಿರೆಯಲ್ಲಿ ವಿಶೇಷಚೇತನರ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿದರು. ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ವಿಕಲಚೇತನರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳ ಸಮಗ್ರ ಮಾಹಿತಿ ನೀಡಿದರು. ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸೀತಾ ಆರ್.ಸೇಠ್ ಇಲಾಖಾ ಮಾಹಿತಿ ನೀಡಿದರು. ಬೆಳ್ತಂಗಡಿ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎ.ಯು.ಯೋಹಾನ್ ಸಹಕಾರ ಸಂಘದ ಪ್ರಮುಖ ಮಾಹಿತಿ ನೀಡಿದರು. ಸಲಹಾ ಸಮಿತಿ ಸದಸ್ಯ ಅಶ್ರಫ್ ಆಲಿ ಕುಂಞ ಮುಂಡಾಜೆ ಬ್ಯಾಂಕ್ ಸದಸ್ಯತ್ವ, ವಿಶೇಷಚೇತನರಿಗಾಗಿಯೇ ರಾಜ್ಯಮಟ್ಟದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನಲ್ಲಿ ಈಗ ಇರುವ ವ್ಯವಹಾರ ವಿವರ, ಸಾಲ ಸೌಲಭ್ಯಗಳ ಮಾಹಿತಿ ನೀಡಿದರು.
 ಗ್ರಾಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಸದಸ್ಯರಾದ ಸಂಧ್ಯಾ, ಮಂಜುಳಾ ಉಮೇಶ್, ಲಲಿತಾ ಬಿ., ಸಚಿನ್, ಶರೀಫ್ ಮತ್ತು ಲಲಿತಾ, ಸಾನಿಧ್ಯ ವಿಶೇಷ ಶಾಲಾ ಮೇಲ್ವಿಚಾರಕಿ ಮಲ್ಲಿಕಾ ರಮೇಶ್, ವಿಕಲಚೇತನರ ಬ್ಯಾಂಕ್ ಪರವಾಗಿ ಸಹನ್ ಕುಮಾರ್, ಭವ್ಯಾ, ಸಿ.ಕೆ.ಚಂದ್ರಕಲಾ, ಸುರೇಶ್ ಲಾಯಿಲ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಎಂ.ಜೆ.ಜೋಸೆಫ್, ರಾಧಿಕಾ, ಸುಲೋಚನಾ, ಈರಣ್ಣ ಉಪಸ್ಥಿತರಿದ್ದರು.
"

ನಮ್ಮ ಪಂಚಾಯಿತಿಯಿಂದ ವಿಶೇಷಚೇತನರ ಮೀಸಲು ಅನುದಾನವನ್ನು ಅವರಿಗಾಗಿಯೇ ವಿನಿಯೋಗಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆ ಪೇಟೆಯಲ್ಲಿರುವ ವಿಶೇಷಚೇತನರ ಶಾಲೆಗೆ ಶಿಕ್ಷಕರನ್ನು ನೇಮಿಸಿ ವೇತನ ಪಾವತಿಸಲಾಗುತ್ತಿದೆ. ನಮ್ಮದಲ್ಲದೆ ಇತರೆಡೆಯಿಂದ ಅರ್ಜಿ ಬಂದರೂ ನಾವು ಸಹಕಾರ ನೀಡಲಿದ್ದೇವೆ.

ಸವಲತ್ತು ವಿತರಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net