ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರ: ನೂತನ ತರಗತಿಗಳ ಉದ್ಘಾಟನೆ, ಗುರುಪೂಜೆ
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ 2026-27ನೇ ಸಾಲಿನ ನೂತನ ತರಗತಿಗಳ ಉದ್ಘಾಟನೆ ಮತ್ತು ಗುರು ಪೂಜೆ-, ಗುರು ವಂದನಾ ಕಾರ್ಯಕ್ರಮ ದುಬೈನ ಫಾರ್ಚೂನ್ ಕ್ಲಾಸಿಕ್‌ನಲ್ಲಿ ರವಿವಾರ ನಡೆಯಿತು. ಸಂತೋಷ್ ಭಟ್ ಎರ್ಮಾಳು, ಶೇಖರ್ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದುಬೈನ ಫಾರ್ಚೂನ್ ಕ್ಲಾಸಿಕ್‌ನಲ್ಲಿ ನಡೆದ ಕಾರ್ಯಕ್ರಮ
ಸಂತೋಷ್ ಭಟ್ ಎರ್ಮಾಳು ಅವರ ಪೌರೋಹಿತ್ಯ
2026-27ನೇ ಸಾಲಿನ ನೂತನ ತರಗತಿಗೆ ಚಾಲನೆ
ಮಂಗಳೂರು: ಮಧ್ಯಪ್ರಾಚ್ಯದ ಏಕೈಕ ಹಾಗೂ ಸರ್ವಪ್ರಥಮ ಸಮಗ್ರ ಯಕ್ಷಗಾನ ಸಂಸ್ಥೆಯಾಗಿ ಹೆಸರಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ 2026-27ನೇ ಸಾಲಿನ ನೂತನ ತರಗತಿಗಳ ಉದ್ಘಾಟನಾ ಸಮಾರಂಭ ಮತ್ತು ಗುರು ಪೂಜೆ-, ಗುರು ವಂದನಾ ಕಾರ್ಯಕ್ರಮ ದುಬೈನ ಫಾರ್ಚೂನ್ ಕ್ಲಾಸಿಕ್‌ನಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯ, ಸದಸ್ಯೆಯರಿಂದ ಭಜನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಕಾರ್ಯಕ್ರಮ ಸಂತೋಷ್ ಭಟ್ ಎರ್ಮಾಳು ಅವರ ಪೌರೋಹಿತ್ಯದಲ್ಲಿ ಪೂಜಾ ವಿಧಿಗಳ ಮೂಲಕ ಆರಂಭಗೊಂಡಿತು. ನಂತರ ಕೇಂದ್ರದ ಹಿರಿಯ ಸದಸ್ಯರು ಮತ್ತು ಗುರುಗಳು ದೀಪ ಬೆಳಗಿಸುವ ಮೂಲಕ 2026-27ನೇ ಸಾಲಿನ ನೂತನ ತರಗತಿಗೆ ಚಾಲನೆ ನೀಡಿದರು.
ಕೇಂದ್ರದ ಮುಖ್ಯ ಗುರು ಶೇಖರ್ ಡಿ. ಶೆಟ್ಟಿಗಾರ್, ನೃತ್ಯ ಗುರು ಶರತ್ ಕುಡ್ಲ ಮತ್ತು ಚೆಂಡೆ ಮದ್ದಳೆ ಗುರು ಸವಿನಯ ನೆಲ್ಲಿತೀರ್ಥ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಶೇಖರ್ ಡಿ. ಶೆಟ್ಟಿಗಾರ್, ನಮ್ಮ ಸನಾತನ ಪರಂಪರೆಯಲ್ಲಿ ಪ್ರಥಮ ಆದ್ಯತೆಯಿಂದ ಗುರುತಿಸಿದ ವಿದ್ಯೆ ಮತ್ತು ಅದರ ಲಕ್ಷ್ಯವಾದ ಜ್ಞಾನಾರ್ಜನೆ ಪರಮ ಗುರಿಯಾಗಿ, ಜ್ಞಾನಾರ್ಜನೆಗಾಗಿ ಸಿಕ್ಕಿದ ಅವಕಾಶಗಳನ್ನು ಕೈಚೆಲ್ಲಬಾರದೆಂದು ತಿಳಿಸಿದರು.
ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಾರ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.