ಸೈಬರ್ ವಂಚನೆ ಇಬ್ಬರು ಅಂತರ್‌ರಾಜ್ಯ ಆರೋಪಿಗಳ ಬಂಧನ - 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ಹಾಗೂ 250 ಕ್ಕೂ ಹೆಚ್ಚು ಸಿಮ್ ಬಳಸಿದ್ದರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಸೈಬರ್ ವಂಚನೆ ನಡೆಸಲು 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ಹಾಗೂ 250 ಕ್ಕೂ ಹೆಚ್ಚು ಸಿಮ್ ಗಳನ್ನು ಬಳಸಿದ್ದ ಆರೋಪಿಗಳನ್ನು ನಗರ ಸೆನ್ ಪೊಲೀಸರು ಬಂಧಿಸಿದ್ದಾರೆ.
ತ್ರಿಪುರಾ ರಾಜ್ಯದ ದೇಮಂಜಯ್ ರಿಯಾಂಗ್ (27) ಹಾಗೂ ಮಣಿಪುರ ರಾಜ್ಯದ ಕಾಂಗ್‌ಪೋಕ್ಪಿ ಜಿಲ್ಲೆಯ ಹೆಮೆಂಗ್ಟೆ ರಿಯೈಲ್ ಕೋಮ್ (33) ಬಂಧಿತರು.
ಅಪಚಿರಿತ ವ್ಯಕ್ತಿ ಕಸ್ಟಮ್ಸ್ ಹೆಸರಿನಲ್ಲಿ ದೂರುದಾರರಿಂದ ಹಂತ ಹಂತವಾಗಿ ಒಟ್ಟು 7,27,000/- ಹಣವನ್ನು ಪಡೆದು ವಂಚನೆ ಮಾಡಿರುವುದಾಗಿ ದೂರುದಾರರು ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ವಿವರ ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ ದೇಮಂಜಯ್ ರಿಯಾಂಗ್ ನ.13 ರಂದು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಸೈಬರ್ ವಂಚಕರಿಗೆ ನೀಡಿದ ಸುಳಿವಿನ ಆಧಾರದಲ್ಲಿ ಹೆಮೆಂಗ್ಟೆ ರಿಯೈಲ್ ಕೋಮ್ ಎಂಬಾತನನ್ನು ನ.15 ರಂದು ಬೆಂಗಳೂರಿನಲ್ಲಿ ಬಂಧಿಸಿ, ನ.16 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿದೆ.
ತನಿಖೆಯ ವೇಳೆ ಆರೋಪಿತನಾದ ಹೆಮೆಂಗ್ಟೆ ರಿಯೈಲ್ ಕೋಮ್ ಎಂಬಾತನು 300 ಕ್ಕೂ ಹೆಚ್ಚೂ ಬ್ಯಾಂಕ್ ಖಾತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚನೆಗ ಬಳಕೆ ಮಾಡಿರುವುದು ಕಂಡು ಬಂದಿರುತ್ತದೆ. ಈತನಿಂದ 8-ಮೊಬೈಲ್ ಫೋನ್ ಗಳು, 20- ವಿವಿಧ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಗಳು,18- ವಿವಿಧ ಬ್ಯಾಂಕ್ ಗಳ ಪಾಸ್ ಬುಕ್ ಗಳು,11- ವಿವಿಧ ಬ್ಯಾಂಕ್ ಗಳ ಚೆಕ್ ಬುಕ್ ಹಾಗೂ 7- ಸಿಮ್ ಕಾರ್ಡ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net