ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರಾಟ ಮಾಡಲು ಗಾಂಜಾ ತಂದು ದಾಸ್ತಾನು ಮಾಡಿದ್ದರು. ಆರೋಪಿಗಳಿಂದ ಗಾಂಜಾ, ಸುಮಾರು 7 ಸಾವಿರ ರೂ. ಮೌಲ್ಯದ 3 ಮೊಬೈಲ್ ಫೋನ್, ಗಾಂಜಾ ಸಾಗಾಟಕ್ಕೆ ಬಳಸಿದ ಸುಮಾರು 3 ಲಕ್ಷ ರೂ. ಮೌಲ್ಯದ ಕಾರು, ಗಾಂಜಾ ಸಂಗ್ರಹಿಸಿದ್ದ 3 ಸಾವಿರ ರೂ. ಮೌಲ್ಯದ 3 ಲಗೇಜ್ ಬ್ಯಾಗ್, ಗಾಂಜಾ ಸೇವಿಸಲು ಬಳಸುವ 2 ಸ್ಟ್ರೀಫ್ಸ್ ಹಾಗೂ ಒಂದು ಸಾವಿರ ರೂ. ನಗದು ಸೇರಿ ಒಟ್ಟು 13,86,500 ರೂ. ಮೌಲ್ಯದ ಸೊತ್ತುಗಳನ್ನು ವಶಡಿಸಿಕೊಳ್ಳಲಾಗಿದೆ.