ಉಪ್ಪಿನಂಗಡಿ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು

ಅಪಹರಣ
ಅಪಹರಣ
Published on

ಉಪ್ಪಿನಂಗಡಿ: ಅನ್ಯಕೋಮಿನ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾತನಿಗೆ ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಪ್ರಕರಣ ತಿರುವು ಪಡೆದಿದ್ದು, ಆತ ಬಾಲಕಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಎಂಬ ವಿಷಯ ಬಯಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈದು ಗ್ರಾಮದ ಹೊಸ್ಮಾರು ಸುಜಲ್ ಆರ್ಕೆಡ್ ಬಳಿಯ ನಿವಾಸಿ ಶೇಕ್ ಮುಕ್ತಾರ್(52) ಎಂಬಾತ ಮಂಗಳವಾರ ರಾತ್ರಿ 9ರ ಸುಮಾರಿಗೆ 13ರ ಹರೆಯದ ಬಾಲಕಿಯನ್ನು ಪಾಲಕರು ಮನೆಯಲ್ಲಿ ಇಲ್ಲದ ವೇಳೆ ಬಲವಂತದಿಂದ ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದನು. ಮಾಹಿತಿ ದೊರೆತ ಪಾಲಕರು ಮಗಳ ರಕ್ಷಣೆಗಾಗಿ ನೆರೆಹೊರೆಯವರಲ್ಲಿ ಕೋರಿದ್ದರು. ಬಾಲಕಿ ಅಪಹರಣದ ಮಾಹಿತಿ ಹಬ್ಬುತ್ತಿದ್ದಂತೆ ರಾತ್ರಿ 11ಕ್ಕೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಬಳಿ ಯುವಕರ ತಂಡವೊಂದು ಕಾರನ್ನು ಅಡ್ಡಗಟ್ಟಿ ಆರೋಪಿಗೆ ಹಲ್ಲೆಗೈದು ಬಾಲಕಿಯ ಸಹಿತ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿಯನ್ನು ಕೆಲಸಕ್ಕೆಂದು ಕರೆದೊಯ್ಯುತ್ತಿದ್ದಾಗ ಗುಂಪು ಅಡ್ಡಗಟ್ಟಿ ಹಲ್ಲೆ ನಡೆಸಿದೆ ಎಂದು ಶೇಕ್ ಮುಕ್ತಾರ್ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪಾಲಕರನ್ನು ಸಂಪರ್ಕಿಸಿದಾಗ ಅಪಹರಣ ಪ್ರಕರಣ ಬಯಲಾಗಿದೆ. ಪ್ರಕರಣವನ್ನು ಕಾರ್ಕಳ ಠಾಣೆಗೆ ವರ್ಗಾಯಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net