ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷೆ ನಿಖಿಲಾ, ಸಾಮಾಜಿಕ ಜಾಲತಾಣದ ಮೂಲಕ ಪರಿಚವಾದ ಮೈಸೂರಿನ ವ್ಯಕ್ತಿಯನ್ನು ಮಂಗಳೂರಿನ ಮಂಗಳಮುಖಿ ಅಪಹರಣ ಮಾಡಿಕೊಂಡು ಆತನಿಗೆ ಜಿಲ್ಲೆಯಲ್ಲಿ ಆಧಾರ್‌ಕಾರ್ಡ್, ಟ್ರಾನ್ಸ್ ಜೆಂಡರ್ ಗುರುತಿನ ಚೀಟಿಯನ್ನು ಕೂಡಾ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ಮಾಡಿಸಿರುತ್ತಾರೆ. ಇದು ಅಪರಾಧವಾಗಿದೆ. ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಗಮನಕ್ಕೆ ಬಾರದೆ ಈ ತಪ್ಪು ನಡೆದಿದ್ದು, ಇದರ ವಿರುದ್ಧ ತನಿಖೆಯಾಗಲಿ ಎಂದರು.