ಸಾವಿರಾರು ಮಂದಿಯ ಉದ್ಯೋಗದಾತ ವಿನಯ ಹೆಗ್ಡೆ : ರವೀಂದ್ರ ಶೆಟ್ಟಿ

ಶ್ರದ್ಧಾಂಜಲಿ ಸಭೆಯಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿದರು. ಸಾಂತ್ಯಗುತ್ತು ಯಜಮಾನ ಶಿವರಾಮ ಶೆಟ್ಟಿ, ಯಕ್ಷಗಾನ ಕಲಾವಿದ ಸದಾಶಿವ ಆಳ್ವ ತಲಪಾಡಿ ಮೊದಲಾದವರಿದ್ದರು.
ಶ್ರದ್ಧಾಂಜಲಿ ಸಭೆಯಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿದರು. ಸಾಂತ್ಯಗುತ್ತು ಯಜಮಾನ ಶಿವರಾಮ ಶೆಟ್ಟಿ, ಯಕ್ಷಗಾನ ಕಲಾವಿದ ಸದಾಶಿವ ಆಳ್ವ ತಲಪಾಡಿ ಮೊದಲಾದವರಿದ್ದರು.
Published on

ಉಳ್ಳಾಲ: ದೇರಳಕಟ್ಟೆ ಎಂಬ ಗುಡ್ಡಕಾಡು ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸುವ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿ ಬಡರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸಿ ದೇರಳಕಟ್ಟೆಗೆ ನಗರದ ರೂಪ ಕೊಟ್ಟವರು ಎನ್.ವಿನಯ ಹೆಗ್ಡೆ ಎಂದು ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಇತ್ತೀಚೆಗೆ ನಿಧನರಾದ ನಿಟ್ಟೆ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಅವರಿಗೆ ಕಿನ್ಯಾ ಕೇಶವ ಶಿಶು ಮಂದಿರದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.

ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಎನ್.ವಿನಯ ಹೆಗ್ಡೆ ಸಂಸ್ಕಾರಯುತ ಶಿಕ್ಷಣ ನೀಡುವ ಸಂಸ್ಥೆಯನ್ನಾಗಿ ಮಾರ್ಪಡಿಸಿ ಮಾದರಿಯಾಗಿದ್ದಾರೆ. ಲೆಮಿನಾ ಸಂಸ್ಥೆ ಮೂಲಕ ಉದ್ಯಮಿಯಾಗಿ ಸಾವಿರಾರು ಮಂದಿಗೆ ಉದ್ಯೋಗದ ಆಶ್ರಯ ನೀಡಿದ್ದಾರೆ ಎಂದರು.

ಸಾಂತ್ಯಗುತ್ತು ಯಜಮಾನ ಶಿವರಾಮ ಶೆಟ್ಟಿ, ಯಕ್ಷಗಾನ ಕಲಾವಿದ ಸದಾಶಿವ ಆಳ್ವ ತಲಪಾಡಿ, ಬಿಜೆಪಿ ಮಂಜನಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಿತ್ಯಾನಂದ ಭಂಡಾರಿ, ಕೇಶವ ಶಿಶು ಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ ಮೊದಲಾದವರು ಉಪಸ್ಥಿತರಿದ್ದರು. ಸಹಕಾರ ಭಾರತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಆಳ್ವ ಸಾಂತ್ಯಗುತ್ತು ಸ್ವಾಗತಿಸಿದರು. ಮಂದಿರದ ಉಪಾಧ್ಯಕ್ಷ ರವಿ ಕನಕಮುಗೇರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net