

ಕಾಸರಗೋಡು: ಪೆರ್ಲ ಸನಿಹದ ಪೂವನಡ್ಕ ರಸ್ತೆಯಲ್ಲಿ ಬಜಕೂಡ್ಲು ಶ್ರೀದುರ್ಗಾಪರಮೇಶ್ವರೀ ಭಜನಾಮಂದಿರ ಸನಿಹ ಮರದ ರೆಂಬೆ ವಿದ್ಯುತ್ ತಂತಿಗೆ ಬಿದ್ದು, ಎರಡು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.
ಈ ಸಂದರ್ಭ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಒಂದು ಆಟೋ ರಿಕ್ಷಾ ಹಾಗೂ ಸ್ಕೂಟಿ ಕೂದಲೆಳೆಯ ಅಂತರದಿಂದ ಪಾರಾಗಿದೆ. ರಸ್ತೆ ಅಂಚಿಗೆ ಬೆಳೆದು ನಿಂತಿದ್ದ ಮರದ ರೆಂಬೆ ಮುರಿದು ತಂತಿಗೆ ಬಿದ್ದಿದ್ದು, ತಕ್ಷಣ ಕೆಎಸ್‌ಇಬಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಿದ್ಯುತ್ ಕಡಿತಗೊಳಿಸಿದ್ದಾರೆ.