ಉಪ್ಪಿನಂಗಡಿಯಲ್ಲಿ ವಾಹನ ದಟ್ಟಣೆಯಿಂದ ಸಮಸ್ಯೆ

ಉಪ್ಪಿನಂಗಡಿಯಲ್ಲಿ ವಾಹನ ದಟ್ಟಣೆಯಿಂದ ಸಮಸ್ಯೆಯಾಗುತ್ತಿದೆ.
ಉಪ್ಪಿನಂಗಡಿಯಲ್ಲಿ ವಾಹನ ದಟ್ಟಣೆಯಿಂದ ಸಮಸ್ಯೆಯಾಗುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಪೇಟೆಯಲ್ಲಿ ವ್ಯಾಪಾರಕ್ಕೆ ಹೊಡೆತ
  • ಕ್ರಮ ವಹಿಸಲು ಪೊಲೀಸರಿಗೆ ಆಗ್ರಹ

ಉಪ್ಪಿನಂಗಡಿ:ಕೆಲವುದಿನಗಳಿಂದ ಹಲವಾರು ಖಾಸಗಿಕಾರ್ಯಕ್ರಮಗಳ ಕಾರಣದಿಂದಾಗಿವಾಹನ ಸಂಚಾರ ಹೆಚ್ಚುತ್ತಿದ್ದು,ಉಪ್ಪಿನಂಗಡಿಯಪ್ರಮುಖ ರಸ್ತೆಗಳಲ್ಲಿ ವಾಹನದಟ್ಟಣೆಯಿಂದ ಜನರು ಸಮಸ್ಯೆಗೀಡಾದರು.

ಇಲ್ಲಿನ ನೇತ್ರಾವತಿನದಿ ಕಿನಾರೆಯಿಂದ ರಾಷ್ಟ್ರೀಯಹೆದ್ದಾರಿ 75ಕೂಡು ರಸ್ತೆಯಲ್ಲಿಮುಂಜಾನೆಯಿಂದ ಮಧ್ಯಾಹ್ನದವರೆಗೆವಾಹನ ದಟ್ಟಣೆಯಿಂದ ಸಂಚಾರಕ್ಕೆಅಡ್ಡಿ ಉಂಟಾಗಿದ್ದು,ಇದರಿಂದಾಗಿಮೊದಲೇ ವ್ಯವಹಾರ ಕುಸಿತಕ್ಕೆಒಳಗಾಗಿರುವ ವ್ಯಾಪಾರಿಗಳುಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಯಿತು.ಪೇಟೆಗೆ ಬಂದಮಂದಿ ಎಲ್ಲಿಯೂ ವಾಹನ ನಿಲ್ಲಿಸಲಾಗದೆವಾಹನಗಳ ಸಾಲಿನಲ್ಲಿ ಮುಂದುವರಿಯಬೇಕಾಗಿಬಂದು, ಅಂಗಡಿಮುಂಗಟ್ಟುಗಳ ವರ್ತಕರು ಗ್ರಾಹಕರಿಲ್ಲದೆ,ರಸ್ತೆಯಲ್ಲಿನವಾಹನಗಳ ಸಾಲನ್ನು ನೋಡುತ್ತಾ ಕಾಲಕಳೆಯುವಂತಾಗಿತ್ತು.

ಈ ಬಗ್ಗೆ ಸ್ಥಳೀಯವರ್ತಕರಿಂದ ಸಾಮಾಜಿಕ ಜಾಲತಾಣಗಳಲ್ಲಿಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇಸ್ಥಳೀಯ ವಾಣಿಜ್ಯ ಮತ್ತು ಕೈಗಾರಿಕಾಸಂಘದ ಪದಾಧಿಕಾರಿಗಳು ಸಮಸ್ಯೆಯನ್ನುಪೊಲೀಸ್ ವೃತ್ತನಿರೀಕ್ಷಕರ ಗಮನಕ್ಕೆತಂದರು. ವಾಹನಸಂಚಾರ ಅಡೆತಡೆಗಳಲ್ಲಿ ಪ್ರಮುಖಪಾತ್ರವಹಿಸುತ್ತಿರುವ ಹೆದ್ದಾರಿಯಅಂಡರ್‌ಪಾಸ್ ಬಳಿಯ ಅನಧಿಕೃತವ್ಯಾಪಾರದ ಬಗ್ಗೆ ಜನರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ವರ್ತಕರಿಂದ ಅನೇಕ ದೂರು ಬಂದಿದೆ. ವಾಹನ ದಟ್ಟಣೆ ಸಮಸ್ಯೆಯಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವರಿಕೆ ಮಾಡಲಾಗಿದೆ. ಠಾಣೆಯ ಸನಿಹದಲ್ಲೆ ಈ ರೀತಿ ಅವ್ಯವಸ್ಥೆ ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸಂಘದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

— ಪ್ರಶಾಂತ್ ಡಿಕೋಸ್ತ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net