ಶಾರದಾ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ದಿನ

ಶಾರದಾ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನ ಆಚರಿಸಲಾಯಿತು.
ಶಾರದಾ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನ ಆಚರಿಸಲಾಯಿತು.
Published on

ಉಳ್ಳಾಲ: ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನ ಆಚರಿಸಲಾಯಿತು.

ವಿದ್ಯಾರ್ಥಿಗಳ ಜತೆ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿ ಪ್ರೋತ್ಸಾಹ ನೀಡಿದರು. ಪ್ರಾಂಶುಪಾಲ ವಿನಾಯಕ್ ಬಿ.ಜಿ., ಉಪಪ್ರಾಂಶುಪಾಲ ಸುರೇಶ್ ಭಟ್ ಉದ್ಘಾಟಿಸಿದರು.

ವಿವಿಧ ತರಗತಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ನಡೆದಾಡಿ ಪ್ರದರ್ಶನ ನೀಡಿದರು. ಮೊದಲ ಸುತ್ತಿನಲ್ಲಿ ಆರು ವಿದ್ಯಾರ್ಥಿಗಳು ಆಯ್ಕೆಗೊಂಡು ಎರಡನೇ ಸುತ್ತಿನ ಅವರ ವೇಷಭೂಷಣ, ನಡೆ ಹಾಗೂ ವಾಗ್‌ವೈಖರಿ ಗಮನಿಸಿ ಸಾಂಪ್ರದಾಯಿಕ ರಾಜ ಹಾಗೂ ಸಾಂಪ್ರದಾಯಿಕ ರಾಣಿಯನ್ನು ಆಯ್ಕೆ ಮಾಡಲಾಯಿತು. ಕೊಡಗಿನ ಮದುವೆ ಹೆಣ್ಣಿನ ಭೂಷಣ ಧರಿಸಿದ ದ್ವಿತೀಯ ಪಿಯುಸಿಯ ತನ್ಮಯಾ ಕೆ.ಸಿ. ಸಾಂಪ್ರದಾಯಿಕ ರಾಣಿ ಸ್ಥಾನ ಪಡೆದರೆ, ಮಿಜೋರಾಮಿನ ಉಡುಗೆ ಧರಿಸಿದ ದ್ವಿತೀಯ ಪಿಯುಸಿಯ ಜೋಹನ್ ಕುಮಾರ್ ಸಾಂಪ್ರದಾಯಿಕ ರಾಜ ಸ್ಥಾನ ಪಡೆದರು.

ಕನ್ನಡ ಉಪನ್ಯಾಸಕ ಸುರೇಶ್ ರಾವ್ ಅತ್ತೂರು, ಆಂಗ್ಲ ಉಪನ್ಯಾಸಕಿ ವರ್ಷ ಪ್ರಶಾಂತ್ ಮತ್ತು ಗಣಕ ವಿಜ್ಞಾನ ಉಪನ್ಯಾಸಕ ಸುನಿಲ್ ಕುಮಾರ್ ತೀರ್ಪುಗಾರರಾಗಿದ್ದರು. ಭೌತಶಾಸ್ತ್ರ ಉಪನ್ಯಾಸಕ ಪ್ರದೀಪ್ ರೈ ಮತ್ತು ಗಣಕ ವಿಜ್ಞಾನ ಉಪನ್ಯಾಸಕಿ ರಶ್ಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net