ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮದಂತೆ 60 ಕಿ.ಮೀ. ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸಬಹುದು. ಆದರೆ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ವಳಾಲು, ಬೆಳ್ತಂಗಡಿ ಸಮೀಪದ ಪಣಕಜೆ ಹಾಗೂ ಗುರುಪುರ ಸಮೀಪದ ಸೂರಲ್ಪಾಡಿಯಲ್ಲಿ ಎನ್‌ಎಚ್ ನಿಯಮ ಮೀರಿ ಟೋಲ್ ಗೇಟ್ ನಿರ್ಮಿಸಲಾಗುತ್ತಿದೆ. ಬ್ರಹ್ಮರಕೂಟ್ಲು ಟೋಲ್‌ನಿಂದ ವಳಾಲಿಗೆ 34 ಕಿಮೀ, ಬ್ರಹ್ಮರಕೂಟ್ಲುವಿನಿಂದ ಪಣಕಜೆಗೆ 27 ಕಿಮೀ, ಗುರುಪುರದಿಂದ ಬ್ರಹ್ಮರಕೂಟ್ಲುವಿಗೆ 34 ಕಿಮೀ, ಗುರುಪುರದಿಂದ ತಲಪಾಡಿಗೆ 34 ಕಿಮೀ, ಗುರುಪುರದಿಂದ ಹೆಜಮಾಡಿಗೆ 44 ಕಿಮೀ ಅಂತರವಿದೆ ಎಂದು ವಿವರಿಸಿದರು.