ಇಂದು ಕದ್ರಿ ಪಾರ್ಕ್‌ನಲ್ಲಿ ವೈನ್ ಮೇಳ ಕೊನೇ ದಿನ

ವೈನ್ ಮೇಳಕ್ಕೆ ಐವನ್ ಡಿಸೋಜ,  ನೌಷಾದ್, ನರಸಿಂಹ ಕುಮಾರ್, ರಾಜೇಂದರ್ ಕುಮಾರ್, ರಮೇಶ್ ನಾಯಕ್ ಮೈರಾ ಮೊದಲಾದವರು ಭೇಟಿ ನೀಡಿದರು.
ವೈನ್ ಮೇಳಕ್ಕೆ ಐವನ್ ಡಿಸೋಜ, ನೌಷಾದ್, ನರಸಿಂಹ ಕುಮಾರ್, ರಾಜೇಂದರ್ ಕುಮಾರ್, ರಮೇಶ್ ನಾಯಕ್ ಮೈರಾ ಮೊದಲಾದವರು ಭೇಟಿ ನೀಡಿದರು.
Published on
ಮಂಗಳೂರು: ನಗರದ ಕದ್ರಿ ಪಾರ್ಕ್‌ನಲ್ಲಿ ಅಭೂತಪೂರ್ವವಾಗಿ ನಡೆಯುತ್ತಿರುವ ಬೃಹತ್ ವೈನ್ ಮೇಳವು ಭಾನುವಾರ ಕೊನೆಗೊಳ್ಳಲಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶೇಡ್ಸ್ ಸಂಸ್ಥೆಯ ಚೇರ್‌ಮೆನ್ ನೌಷಾದ್, ಯೂನಿಯನ್ ಬ್ಯಾಂಕ್ ಡಿಜಿಎಂ - ರೀಜನಲ್ ಹೆಡ್ ನರಸಿಂಹ ಕುಮಾರ್, ಜನರಲ್ ಮ್ಯಾನೇಜರ್ ಹಾಗೂ ರೆನಲ್ ಹೆಡ್ ರಾಜೇಂದರ್ ಕುಮಾರ್, ರಮೇಶ್ ನಾಯಕ್ ಮೈರಾ, ಸುಚಿತ್ರಾ ಆರ್. ನಾಯಕ್, ಸುಧಾಕರ ನಾಯಕ್ ಭೇಟಿ ನೀಡಿದರು.
ರತ್ನಾಸ್ ವೈನ್ ಗೇಟ್, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ ಇಲಾಖೆಗಳ ಸಹಯೋಗದಲ್ಲಿ ಬೆಳಗ್ಗೆ 10.30ರಿಂದ ರಾತ್ರಿ 9.30 ಗಂಟೆಯವರೆಗೆ ನಿರಂತರ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿರುವ ವೈನ್ ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಈ ಮೇಳದಲ್ಲಿ ದ್ರಾಕ್ಷಾ ರಸದ ಆರೋಗ್ಯಕಾರಿ ಉಪಯೋಗಗಳು, ಸವಿಯುವ ಕ್ರಮ, ದಾಸ್ತಾನು ವಿಧಾನಗಳು ಸೇರಿದಂತೆ ಅಗತ್ಯ ಮಾಹಿತಿಗಳೊಂದಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ನೂರಾರು ಬ್ರಾಂಡ್‌ಗಳ ವೈನ್ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಕಂಪನಿಗಳ ಹೊಸ ಸಂಗ್ರಹಗಳು, ತಾಜಾ ಪಾನೀಯಗಳು ಮತ್ತು ಸವಿದು ಆಯ್ಕೆಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ವೈನ್ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯುತ್ತಮ ಕೊಡುಗೆಗಳು, ಅತ್ಯಾಕರ್ಷಕ ರಿಯಾಯಿತಿ ದರಗಳು ಲಭ್ಯವಿದ್ದು, ವೈನ್ ಪ್ರಿಯರಿಗೆ ಖರೀದಿಗೆ ಸುವರ್ಣಾವಕಾಶವಾಗಿದೆ. ಮೇಳದಲ್ಲಿ ಮನರಂಜನೆಗೂ ವಿಶೇಷ ಮೆರುಗು ನೀಡಲಾಗಿದೆ. ಸಂಜೆ ವೇಳೆಯಲ್ಲಿ ಲೈವ್ ಟ್ರಾೃಕ್ ಮ್ಯೂಸಿಕ್, ಮಕ್ಕಳಿಗಾಗಿ ವಿವಿಧ ಆಟೋಟ ಮತ್ತು ಸ್ಪರ್ಧೆಗಳು ಹಾಗೂ ಕುಟುಂಬ ಸಮೇತರಾಗಿ ದಿನವಿಡೀ ಕಳೆಯಲು ಅನುಕೂಲಕರ ವಾತಾವರಣ ಕಲ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net