ಕರ್ನಾಟಕದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ದುಬೈನ ಭಾರತದ ಕೌನ್ಸಿಲ್ ಜನರಲ್ ಸತೀಶ್ ಕುಮಾರ್ ಶಿವನ್ ಭಾಗವಹಿಸಿದ್ದು, ತಮ್ಮ ಸಂದೇಶದಲ್ಲಿ ಗಲ್ಪ್ ಪ್ರದೇಶದಲ್ಲಿ ಭಾರತೀಯ ಸಮುದಾಯ ನೀಡಿರುವ ಕೊಡುಗೆ ಹಾಗೂ ತುಂಬೆ ಗ್ರೂಪ್‌ನ ಜಾಗತಿಕ ಮಟ್ಟದ ಸಾಧನೆಗಳನ್ನು ಪ್ರಶಂಸಿದರು. ಭಾರತೀಯ ಸಮುದಾಯದ ನಾಯಕರಾದ ಡಾ.ಕಾಪು ಮುಹಮ್ಮದ್, ಪ್ರವೀಣ್ ಶೆಟ್ಟಿ, ಮೊಹಮ್ಮದ್ ಅಲಿ ಉಚ್ಚಿಲ್, ಶಶಿಧರ ನಾಗಾರಾಜಪ್ಪ ಮತ್ತು ಹಿದಾಯತ್ ಅಡ್ಡೂರು ಏಕತೆ, ಸೇವೆ ಮತ್ತು ಸಾಮೂಹಿಕ ಪ್ರಗತಿಯ ಮಹತ್ವವನ್ನು ವಿವರಿಸಿದರು.