ಭಾನುವಾರ ಮತ್ತಿತರ ರಜಾ ದಿನಗಳಲ್ಲಿ ರಜೆಯ ಮಜಾ ಅನುಭವಿಸಲು ಬರುವ ಕುಡುಕರು ಮದ್ಯ ಸೇವಿಸಿ ಬಳಿಕ ಅದರ ಬಾಟಲ್, ಸ್ಯಾಚೆಟ್‌ಗಳನ್ನು ನದಿಗೆ, ನದಿ ಬದಿಯ ತೋಡಿಗೆ ಎಸೆದು ಹೋಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪೊಲೀಸರು ಮೋಜು ಮಸ್ತಿಯಲ್ಲಿದ್ದ ಕುಡುಕರಿಗೆ ಬಿಸಿ ಮುಟ್ಟಿಸಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೂ ಕೆಲವರು ತಮ್ಮ ಚಾಳಿ ಮುಂದುವರಿಸಿದ್ದು, ಪರಿಸರವನ್ನು ಮದ್ಯದ ಬಾಟಲುಗಳು, ಕಸವನ್ನು ಎಸೆಯುವ ಅಡ್ಡೆಯಾಗಿ ಮಾರ್ಪಾಡಿಸಿದ್ದಾರೆ. ಇದು ಈ ಭಾಗದಲ್ಲಿ ನಡೆದು ಹೋಗುವ ಸಾರ್ವಜನಿಕರಿಗೆ, ವಾಕಿಂಗ್‌ಗೆ ಬರುವವರಿಗೆ ಅಸಹ್ಯ ಹುಟ್ಟಿಸುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ.