ಪೊಲೀಸರು ಗಸ್ತು ಕರ್ತವ್ಯದಲ್ಲಿದ್ದ ವೇಳೆ ಬಿಜೈ ಕಾಪಿಕಾಡ್ ಬಳಿ ಮೂವರು ಯುವಕರು ಸಿಗರೇಟು ಸೇದುತ್ತಾ ನಿಂತಿರುವುದು ಕಂಡು ಬಂದಿದೆ. ಸಂಶಯಗೊಂಡು ಅವರ ಬಳಿ ತೆರಳಿದಾಗ ಕೈಯಲ್ಲಿದ್ದ ಸಿಗರೇಟನ್ನು ಅಲ್ಲೇ ಚರಂಡಿ ನೀರಿಗೆ ಬಿಸಾಡಿದ್ದಾರೆ. ವಿಚಾರಿಸಿದಾಗ ಅವರ ಬಾಯಿ ತೊದಲಿದ್ದು, ಘಾಟು ವಾಸನೆ ಬಂದಿದೆ. ಮತ್ತಷ್ಟು ವಿಚಾರಿಸಿದಾಗ ಸಿಗರೇಟಿಮೊಳಗೆ ಮಾದಕ ವಸ್ತು ತುಂಬಿಸಿ ಸೇದುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.