2009ರ ಫೆ.27ರಂದು ರಾತ್ರಿ 1.30ರ ವೇಳೆಗೆ ಕಣಂತೂರು ಎಂಬಲ್ಲಿನ ಶ್ರೀ ಕ್ಷೇತ್ರ ತೋಡಕುಕ್ಕಿನಾರ್ ದೈವಸ್ಥಾನದ ಬಾಗಿಲಿನ ಬೀಗವನ್ನು ಕಬ್ಬಿಣದ ಲಿವರ್‌ನಿಂದ ಮುರಿದು ಒಳಪ್ರವೇಶಿಸಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳವು ಮಾಡಿದ್ದ. ಬಳಿಕ ದೈವಸ್ಥಾನದ ಪಕ್ಕದಲ್ಲಿರುವ ಭಂಡಾರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ, ಒಳಭಾಗದಲ್ಲಿರುವ ದೈವದ ಕೋಣೆಯ ಬಾಗಿಲಿನ ಬೀಗವನ್ನು ಮುರಿದು 1.20 ಲಕ್ಷ ರೂ. ಮೌಲ್ಯದ 100 ಗ್ರಾಂ. ತೂಕದ ಬಂಗಾರ, 120 ಗ್ರಾಂ ತೂಕದ ಬೆಳ್ಳಿಯನ್ನು ಹೊಂದಿರುವ 2 ಕಿರುವಾಳ (ಖಡ್ಗ), 145 ಗ್ರಾಂ. ತೂಕದ ಬಂಗಾರದ ಹೊದಿಕೆ ಇರುವ ಕಬ್ಬಿಣದ ಬಾಣ, ಸುಮಾರು 7,000 ರೂ. ಮೌಲ್ಯದ 260 ಗ್ರಾಂ. ತೂಕದ ಬೆಳ್ಳಿಯ ಕಲಶ, 6,000 ರೂ. ಮೌಲ್ಯದ 250 ಗ್ರಾಂ.ತೂಕದ ಬೆಳ್ಳಿಯ ಶಿವನ ಪ್ರತಿಮೆಯ ಸತ್ತಿಗೆ (ಬೆಳ್ಳಿಯ ಹೂ), 2,000 ರೂ. ಮೌಲ್ಯದ 75 ಗ್ರಾಂ.ತೂಕದ ಬೆಳ್ಳಿಯ ದುರ್ಗಾಲಯ ಮೂರ್ತಿಯ ಸತ್ತಿಗೆ, ಕಾಣಿಕೆ ಡಬ್ಬಿಯಲ್ಲಿದ್ದ 2,000 ರೂ. ಕಳವು ಮಾಡಿದ್ದ. ಬಳಿಕ ಇದನ್ನು ಎರಡನೇ ಆರೋಪಿಗೆ ಮಾರಿದ್ದು, ಆತ ಕಳ್ಳತನದ ಸೊತ್ತು ಎಂದು ಗೊತ್ತಿದ್ದರೂ ಸ್ವೀಕರಿಸಿದ್ದ.