

ಕೊಕ್ಕಡ: ಹಿಂದೂ ಧರ್ಮದ ಕುರಿತಾದ ಶಿಕ್ಷಣ ಈಗಿನ ಪೀಳಿಗೆಗೆ ನೀಡುವುದು ಹಿಂದೂ ಧರ್ಮದ ಉತ್ಥಾನದ ಎಲ್ಲ ಕಾರ್ಯಗಳಲ್ಲಿ ಆಗಬೇಕಾದ ಒಂದು ಕಾರ್ಯವಾಗಿರದೆ ಅತ್ಯಗತ್ಯವಾಗಿ ಕೈಗೊಳ್ಳಬೇಕಾದ ಕಾರ್ಯವಾಗಿದೆ. ಹಿಂದೂಗಳು ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನಾಚಾರ ಪೂರಿತ ಆಚರಣೆ ಕೈ ಬಿಡಬೇಕು. ಹಿಂದೂ ಚಿಂತನೆಗಳಲ್ಲಿ ಅಸ್ಪಶ್ಯತೆಗೆ ಅವಕಾಶ ಇಲ್ಲ ಎಂದು ಪಟ್ಟೂರು ಶ್ರೀರಾಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಹೇಳಿದರು.
ನೆಲ್ಯಾಡಿ ಗ್ರಾಮದ ಕುತ್ರಾಡಿ ಹಾರ್ಪಳದ ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜೋತಿಷಿ ಶ್ರೀಧರ ಗೋರೆ ಕಾರ್ಯಕ್ರಮ ಉದ್ಘಾಟಿಸಿದರು. ಶೀನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾತಾಜಿ ಹಾಗೂ ಶ್ರೀಮಾನ್‌ಗಳಾಗಿ ಆಯ್ಕೆಯಾಗಿರುವ ವಸಂತಿ ದಗ್ಗೋಡಿ, ಚಿತ್ರಾ ಪಡಿಪಂಡ, ಶಂಕರ್, ಭಾಗೀರಥಿ, ಯೋಗಿಶ್ವರಿ ಪುಳಿತ್ತಡಿ, ಯಾದವ ಶೆಟ್ಟಿ, ರಜನಿ, ರತ್ನಾವತಿ ಉಳಿತೊಟ್ಟು, ಸಂಕೇತ್ ಶೆಟ್ಟಿ, ಶೀನಪ್ಪ ಅವರನ್ನು ಗೌರವಿಸಲಾಯಿತು.
ಪುತ್ತೂರು ತಾಲೂಕು ಸಮಿತಿಯ ಬಾಲಕೃಷ್ಣ ಬೋರ್ಕರ್, ಆರ್.ಸಿ.ನಾರಾಯಣ, ದೇವಳದ ಅಧ್ಯಕ್ಷ ಸುಂದರ ಗೌಡ, ಬೆಳ್ತಂಗಡಿ ವಿಭಾಗ ಉಪ ವಲಯ ಅರಣಾಧಿಕಾರಿ ರವಿಚಂದ್ರ, ಧನಂಜಯ ಗೌಡ, ದೇವಳದ ಪ್ರಧಾನ ಅರ್ಚಕರಾದ ಶ್ರೀಧರ್ ನೂಜಿನ್ನಾಯ, ಧನಂಜಯ ಆಚಾರ್ಯ, ಚಂದ್ರಶೇಖರ್ ರೈ, ಧನಂಜಯ ಗೌಡ, ಮಧುಶ್ರೀ, ರಘುನಾಥ ರೈ, ಚಂದ್ರಶೇಖರ್, ಕಡಬ ತಾಲೂಕು ಸಮಿತಿಯ ಉಮೇಶ್ ಸಾಯಿರಾಮ್, ಜನಾರ್ದನ ಆರಿಗ, ರುಕ್ಮಯ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಕೊರಗಪ್ಪ ಗೌಡರ ಸ್ಮರಣಾರ್ಥ ದೇವಸ್ಥಾನಕ್ಕೆ 300 ಊಟದ ತಟ್ಟೆ ಹಸ್ತಾಂತರಿಸಲಾಯಿತು. ರಜನಿ ಸ್ವಾಗತಿಸಿದರು. ಬಾಲಕೃಷ್ಣ ಗೌಡ ವಂದಿಸಿದರು. ಭಾಗೀರಥಿ ನಿರೂಪಿಸಿದರು.