ಸಾಧನೆಗೆ ವಯಸ್ಸಿನ ಮಿತಿ ಇಲ್ಲ

ವಿಶ್ವದಾಖಲೆ ಸಾಧನೆ ಸಂಭ್ರಮ
ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಗುರುವಾರ ಆಳ್ವಾಸ್ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ವಿಷ್ಣುಪ್ರಿಯಾ ಪೈ ಅವರ ವಿಶ್ವದಾಖಲೆ ಸಾಧನೆಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಸುಲೋಚನಾ ಜಿ.ಕೆ.ಭಟ್ ಮೊದಲಾದವರಿದ್ದರು.
ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಗುರುವಾರ ಆಳ್ವಾಸ್ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ವಿಷ್ಣುಪ್ರಿಯಾ ಪೈ ಅವರ ವಿಶ್ವದಾಖಲೆ ಸಾಧನೆಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಸುಲೋಚನಾ ಜಿ.ಕೆ.ಭಟ್ ಮೊದಲಾದವರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಆಸಕ್ತಿ, ಪರಿಶ್ರಮ, ಕುಟುಂಬದ ಬೆಂಬಲವಿದ್ದರೆ ಬಾಲ್ಯದಲ್ಲಿಯೇ ವಿಶ್ವದಾಖಲೆ ನಿರ್ಮಿಸಲು ಸಾಧ್ಯ ಎಂಬುದನ್ನು ವಿಷ್ಣುಪ್ರಿಯಾ ಪೈ ಸಾಬೀತುಪಡಿಸಿದ್ದಾರೆ ಎಂದು ಸಾಹಸಸಿಂಹ ಡಾ.ವಿಷ್ಣುವರ್ಧನರ ಪುತ್ರಿ ಕೀರ್ತಿ ವಿಷ್ಣುವರ್ಧನ್ ಹೇಳಿದರು.

ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ 15 ದಿನಗಳಲ್ಲಿ ಕರ್ನಾಟಕದ 54 ವಿದ್ಯಾಸಂಸ್ಥೆಗಳ 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣದ ಕುರಿತು ತರಬೇತಿ ನೀಡಿ ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಗುರುವಾರ ಆಳ್ವಾಸ್ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ವಿಷ್ಣುಪ್ರಿಯಾ ಪೈ ಅವರ ವಿಶ್ವದಾಖಲೆ ಸಾಧನೆ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್ ಏಷ್ಯಾ ವಿಭಾಗ ಮುಖ್ಯಸ್ಥ ಡಾ.ಮನೀಷ್ ಬಿಷ್ಣೋಯಿ, ಶಾಸಕ ರಾಜೇಶ್ ನಾಯ್ಕ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ, ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ, ಕುಟುಂಬದ ಬೆಂಬಲವೇ ಸಾಧನೆ ಹಿಂದಿನ ಶಕ್ತಿ. ವಿಷ್ಣುಪ್ರಿಯಾ ಆಳ್ವಾಸ್‌ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲು ಬಯಸಿದರೆ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.

ವಿಷ್ಣುಪ್ರಿಯಾ ಪೈ ತಮ್ಮ ವಿಶ್ವದಾಖಲೆಯನ್ನು ನಟ ಡಾ.ವಿಷ್ಣುವರ್ಧನ್ ಅವರಿಗೆ ಸಮರ್ಪಿಸುವುದಾಗಿ ತಿಳಿಸಿದರು. ಡಾ.ಮನೀಷ್ ಬಿಷ್ಣೋಯಿ ವಿಶ್ವದಾಖಲೆಯ ಅಧಿಕೃತ ಪ್ರಮಾಣಪತ್ರ ಪ್ರದಾನ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಸುಲೋಚನಾ ಜಿ.ಕೆ.ಭಟ್, ಉಡುಪಿ ಶಾರದಾ ವಸತಿ ಕಾಲೇಜಿನ ಪ್ರಾಚಾರ್ಯ ವಿನ್ಸೆಂಟ್ ಡಿಸೋಜ, ಆಳ್ವಾಸ್ ಸೆಂಟ್ರಲ್ ಶಾಲೆ ಮೊಹಮ್ಮದ್ ಶಫೀಶೇಖ್, ಸುಧೀಂದ್ರ ವಿಶ್ವತೀರ್ಥರು ಉಪಸ್ಥಿತರಿದ್ದರು. ವಿಷ್ಣುಪ್ರಿಯಾ, ಡಾ.ಮನೀಷ್ ಬಿಷ್ಣೋಯಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net