ಧಾರಾವಾಹಿಯಲ್ಲಿ ಆದರ್ಶದ ಕಥೆ ಮುಖ್ಯ

ಸಾಹಿತ್ಯ ಪಟ್ಟಾಂಗ ಕಾರ್ಯಕ್ರಮ
 ಸಾಹಿತ್ಯ ಪಟ್ಟಾಂಗ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಧರ ಡಿ.ಎಸ್. ಬರೆದ ಬೆಂಗಳೂರು ಸಾಹಿತ್ಯ ಭಂಡಾರ ಪ್ರಕಟಿಸಿರುವ ಕಾದಂಬರಿ ಗಾಂಡೀವಿ, ದಾಮೋದರ ಶೆಟ್ಟಿ ಇರುವೈಲು ಬರೆದಿರುವ ಮರೆತ ಅಪರಂಜಿಗಳು ಕೃತಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಪುರುಷೋತ್ತಮ ಕೋಟ್ಯಾನ್ ಮೊದಲಾದವರಿದ್ದರು.
ಸಾಹಿತ್ಯ ಪಟ್ಟಾಂಗ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಧರ ಡಿ.ಎಸ್. ಬರೆದ ಬೆಂಗಳೂರು ಸಾಹಿತ್ಯ ಭಂಡಾರ ಪ್ರಕಟಿಸಿರುವ ಕಾದಂಬರಿ ಗಾಂಡೀವಿ, ದಾಮೋದರ ಶೆಟ್ಟಿ ಇರುವೈಲು ಬರೆದಿರುವ ಮರೆತ ಅಪರಂಜಿಗಳು ಕೃತಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಪುರುಷೋತ್ತಮ ಕೋಟ್ಯಾನ್ ಮೊದಲಾದವರಿದ್ದರು.
Published on: 

ಕಿನ್ನಿಗೋಳಿ: ಜನರು ಕಥೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅವಲಂಬಿಸಿ ಟಿವಿ ಧಾರಾವಾಹಿಗಳು ಬೆಳೆಯುತ್ತವೆ ಅಥವಾ ನಿಲ್ಲುತ್ತವೆ. ಸದಭಿರುಚಿಯ ಆದರ್ಶದ ಕಥೆಗಳನ್ನು ಒಪ್ಪುವ ಜನರ ಮನಸ್ಥಿತಿಗಿಂತ ಅತ್ತೆ ಸೊಸೆ, ಮನೆ ಜಗಳ, ಎರಡು ಸಂಬಂಧ ಇಂತಹ ಕತೆಗಳನ್ನೇ ಹೆಚ್ಚು ಬಯಸುತ್ತಾರೆ. ಆದ್ದರಿಂದ ಅಂತಹ ಧಾರಾವಾಹಿಗಳೇ ಹೆಚ್ಚು ಬರುತ್ತಿವೆ ಎಂದು ಧಾರಾವಾಹಿಗಳ ಜನಪ್ರಿಯ ಬರಹಗಾರ ಶ್ರೀನಿಧಿ ಡಿ.ಎಸ್. ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಘಟಕ 150 ವರ್ಷಗಳ ಹಳೆಯ ಕೊಡೆತ್ತೂರು ಗುತ್ತಿನ ಮನೆಯಲ್ಲಿ ಆಯೋಜಿಸಿದ ಸಾಹಿತ್ಯ ಪಟ್ಟಾಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತಿ ಶ್ರೀಧರ ಡಿ.ಎಸ್. ಬರೆದ ಬೆಂಗಳೂರು ಸಾಹಿತ್ಯ ಭಂಡಾರ ಪ್ರಕಟಿಸಿರುವ ಕಾದಂಬರಿ ಗಾಂಡೀವಿ, ದಾಮೋದರ ಶೆಟ್ಟಿ ಇರುವೈಲು ಬರೆದಿರುವ ಕಿನ್ನಿಗೋಳಿ ಗಾಯತ್ರಿ ಪ್ರಕಾಶನ ಪ್ರಕಟಿಸಿರುವ ಮರೆತ ಅಪರಂಜಿಗಳು ಕೃತಿಗಳನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಪುರುಷೋತ್ತಮ ಕೋಟ್ಯಾನ್ ಬಿಡುಗಡೆಗೊಳಿಸಿದರು.

ವಿದ್ವಾಂಸ ರವೀಂದ್ರ ಅತ್ತೂರು ಕೃತಿಗಳ ಬಗ್ಗೆ ಮಾತನಾಡಿದರು. ಕಸಾಪ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಕೃತಿಕಾರರನ್ನು, ಶ್ರೀನಿಧಿ ಡಿ.ಎಸ್. ಅವರನ್ನು ಗೌರವಿಸಿದರು. ದೇವಸ್ಯ ಮತ್ತು ಕೊಡೆತ್ತೂರುಗುತ್ತಿನ ಗುತ್ತಿನಾರ್ ನಿತಿನ್ ಶೆಟ್ಟಿ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿಗಳಾದ ಹೆರಿಕ್ ಪಾಯಸ್, ಪ್ರಕಾಶ ಆಚಾರ್, ಜೊಸ್ಸಿ ಪಿಂಟೋ, ದೇವದಾಸ ಮಲ್ಯ, ಮಾಧವ ಕೆರೆಕಾಡು, ಕೃಷ್ಣರಾಜ ಭಟ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net