

ವಿಜಯವಾಣಿ ಸುದ್ದಿಜಾಲ ಕಟೀಲು
ಕನ್ನಡ ಉಳಿಯಬೇಕಾದರೆ ಅದನ್ನು ಬಳಸಿ ಬೆಳಸಬೇಕು. ಕನ್ನಡದ ಮೇಲೆ ಪ್ರೀತಿ ಹುಟ್ಟಬೇಕು. ಕನ್ನಡ ಉದ್ಯೋಗದ ಭಾಷೆ ಯೊಂದಿಗೆ ಅನ್ನದ ಬಾಷೆ, ಬದುಕಿನ ಬಾಷೆ ಆಗಬೇಕು. ಭಾಷೆಯ ಸುತ್ತ ಸಂಸ್ಕೃತಿ, ಇತಿಹಾಸವಿದೆ. ಮಕ್ಕಳಲ್ಲಿ ಕನ್ನಡ ಉಳಿಸುವ ಹೊಣೆಗಾರಿಕೆ ಇದ್ದರೆ ಮಾತ್ರ ಉಳಿಸಲು ಸಾಧ್ಯ ಎಂದು ಕರ್ನಾಟಕ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಆರನೇ ವರ್ಷದ ‘ಭ್ರಮರ ಇಂಚರ ನುಡಿಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ಪದವಿ ಕಾಲೇಜಿನಿಂದ ನುಡಿಹಬ್ಬ ವೇದಿಕೆಯವರೆಗೆ ನಡೆದ ಮೆರವಣಿಗೆಗೆ ಮದ್ಯಗುತ್ತು ಕರುಣಾಕಣ ಶೆಟ್ಟಿ ಚಾಲನೆ ನೀಡಿದರು. ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ನ ಜನರಲ್ ಮ್ಯಾನೇಜರ್ ದಿವಾಕರ ಕದ್ರಿ ಧ್ವಜಾರೋಹಣಗೈದರು. ಕಿನ್ನಿಗೋಳಿ ಪಪಂ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ವಸ್ತುಪ್ರದರ್ಶನ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಬಿ.ಜನಾರ್ಧನ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಮೊಕ್ತೇಸರ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ಎಂಆರ್ಪಿಎಲ್ ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಕೇಶವ ಪಾಟಾಳಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷ್ಯತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಕಬ್ಬಿನಾಲೆ ವಸಂತ ಭಾರಧ್ವಜ್, ಬಿಪಿನ್ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಲೋಕಯ್ಯ ಸಾಲಿಯಾನ್ ಕೊಂಡೇಲ, ಕಿರಣ್ ಕುಮಾರ್ ಶೆಟ್ಟಿ, ಭಾರತಿ ಶೆಟ್ಟಿ ಎಕ್ಕಾರು, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಗ್ರೇಗರಿ, ದೇವಿಪ್ರಸಾದ್ ಕಟೀಲು, ಬಾಲಕೃಷ್ಣ ಪೂಂಜ, ಪದವಿ ಕಾಲೇಜು ಪ್ರಾಂಶುಪಾಲ ಡಾ.ವಿಜಯ, ಪದವಿ ಪೂರ್ವ ವಿಭಾಗ ಪ್ರಾಂಶುಪಾಲೆ ಕುಸುಮಾವತಿ, ರಾಜಶೇಖರ್, ಸರೋಜಿನಿ, ಚಂದ್ರ ಶೇಖರ ಭಟ್, ಗಿರೀಶ್ ತಂತ್ರಿ, ಸಂಚಾಲಕ ದಯಾನಂದ ಮಾಡ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು. ಉಪನ್ಯಾಸಕಿ ಶೈಲಜಾ ನಿರೂಪಿಸಿದರು.