ಈ ಸಂದರ್ಭ ಮನೆಯವರು ದೇವಸ್ಥಾನ, ಪೇಟೆಯ ವಿವಿಧೆಡೆ ಹುಡುಕಾಡಿದರೂ ಕಾಣಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಾಪಕ ಹುಡುಕಾಟದಲ್ಲಿ ನಿರತರಾಗಿ ವಾಹನ ತಪಾಸಣೆ ಚುರುಕುಗೊಳಿಸಿದರೂ ಬಾಲಕಿಯನ್ನು ಪತ್ತೆಹಚ್ಚಲಾಗಿಲ್ಲ. ಮನೆಯವರು, ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ಬೆಳಗಿನ ಜಾವ 2ರ ವೇಳೆಗೆ ಏಕಾಏಕಿ ಬಾಲಕಿ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾಳೆ. ಈಕೆಯನ್ನು ವಿಚಾರಿಸಿದಾಗ 18ರ ಹರೆಯದ ಯುವಕ ತನ್ನನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿರುವುದಾಗಿ ತಿಳಿಸಿದ್ದಾಳೆ. ಬಾಲಕಿ ವಾಪಸಾದ ಬಗ್ಗೆ ಹೆತ್ತವರು ಹಾಗೂ ಪೊಲೀಸರು ನಿಟ್ಟುಸಿರು ಬಿಟ್ಟರೂ ಬಾಲಕಿ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಪಹರಿಸಿದ 18ರ ಹರೆಯದ ಯುವಕನಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.