ಅನೈತಿರ ಅಡ್ಡೆ ಕೆಪಿಟಿ ಕಟ್ಟಡ!

ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ವಸತಿ ನಿಲಯವೊಂದಕ್ಕೆ ಒದಗಿರುವ ಘೋರ ದುಸ್ಥಿತಿ.
ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ವಸತಿ ನಿಲಯವೊಂದಕ್ಕೆ ಒದಗಿರುವ ಘೋರ ದುಸ್ಥಿತಿ.
Published on
ಮಂಗಳೂರು: ಹಗಲಾದರೆ ಕುಡುಕರ ಅಬ್ಬರ, ಸಾರಾಯಿ ಬಾಟಲಿಗಳ ಸದ್ದು; ರಾತ್ರಿಯಾದರೆ ಮಂಗಳಮುಖಿಯರ ಆವಾಸತಾಣ ಹಾಗೂ ಅನೈತಿಕ ಚಟುವಟಿಕೆಗಳ ತಾಣ... ಇದು ಯಾವುದೋ ಮಾದಕ ದ್ರವ್ಯ ದಂಧೆಕೋರರ ಅಡಗುತಾಣದ ಕಥೆಯಲ್ಲ! ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ವಸತಿ ನಿಲಯವೊಂದಕ್ಕೆ ಒದಗಿರುವ ಘೋರ ದುಸ್ಥಿತಿ.
ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಬೃಹತ್ ಅನುದಾನದಲ್ಲಿ ಮಂಗಳೂರಿನ ಗುಂಡಳಿಕೆ ಹಾಗೂ ಶರ್ಬತ್‌ಕಟ್ಟೆ ಸಮೀಪ ನಿರ್ಮಾಣಗೊಂಡಿರುವ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (ಕೆಪಿಟಿ) ಬಾಲಕ ಮತ್ತು ಬಾಲಕಿಯರ ಸುಸಜ್ಜಿತ ವಿದ್ಯಾರ್ಥಿನಿಲಯದ ಕಟ್ಟಡಗಳು ಇಂದು ಸಮಾಜ ಕಂಟಕರ ಪಾಲಾಗಿವೆ. ಹಾಸ್ಟೇಲ್ ನಿರ್ಮಾಣಕ್ಕೆಂದೇ ಉನ್ನತ ಶಿಕ್ಷಣ ಇಲಾಖೆ ಅನುದಾಣದಲ್ಲಿ ಗುಂಡಳಿಕೆ(ಹೊಸತು) ಹಾಗೂ ಶರ್ಬತ್‌ಕಟ್ಟೆ(ಹಳೆ) ಬಳಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ನಿಮಯಮದ ಪ್ರಕಾರ ಕೆಪಿಟಿಗೆ ತಾಂತ್ರಿಕ ಶಿಕ್ಷಣ ತರಬೇತಿ ನೀಡುವುದು ಮಾತ್ರ ಕೆಲಸ, ಹಾಸ್ಟೇಲ್ ನಿರ್ವಹಣೆ ಹಾಗೂ ನಡೆಸುವ ಅಧಿಕಾರ ಇಲ್ಲ. ಇದೇ ಕಾರಣದಿಂದ ಈ ಕಟ್ಟಡವನ್ನು ಬಿಸಿಎಂಗೆ ಹಸ್ತಾಂತರಿಸಲು ರಾಜ್ಯ ಸರ್ಕಾರವೇ ಆದೇಶಿಸಿತ್ತು. ಸರ್ಕಾರದ ಆದೇಶವನ್ನು ಕಳೆದ ಒಂದು ವರ್ಷದಿಂದ ಗಾಳಿಗೆ ತೂರಿರುವ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (ಕೆಪಿಇ) ಆಡಳಿತ ಮಂಡಳಿಯ ಧೋರಣೆಗೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜೂನ್ 22ರಂದು ಜಿಲ್ಲಾಧಿಕಾರಿಗಳು ಕೆಪಿಟಿ ಪ್ರಾಂಶುಪಾಲರಿಗೆ ಅಧಿಕೃತ ಆದೇಶ ಪತ್ರದ ಮೂಲಕ ಕಟ್ಟಡಗಳನ್ನು ತಕ್ಷಣ ಹಸ್ತಾಂತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳ ಹಠಮಾರಿ ತನ ಹಾಗೂ ಉಡಾಫೆ ಎಷ್ಟರ ಮಟ್ಟಿಗಿದೆ ಎಂದರೆ, ಅವರು ಸ್ವತಃ ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡಿಲ್ಲ!
ಮಂಗಳೂರಿನ ಗುಂಡಳಿಕೆ ಹಾಗೂ ಶರ್ಬತ್‌ಕಟ್ಟೆ ಸಮೀಪ ನಿರ್ಮಾಣಗೊಂಡಿರುವ ಕೆಪಿಟಿ ಸುಸಜ್ಜಿತ ವಿದ್ಯಾರ್ಥಿನಿಲಯದ ಕಟ್ಟಡಗಳು ಇಂದು ಸಮಾಜ ಕಂಟಕರ ಪಾಲಾಗಿವೆ.

ರಾಜ್ಯ ಸರ್ಕಾರದ ಆದೇಶ ಕ್ಯಾರೆ ಎನ್ನದ ಕೆಪಿಟಿ
ಕಳೆದ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡು ಧೂಳು ಹಿಡಿಯುತ್ತಿದ್ದ ಈ ಕಟ್ಟಡಗಳನ್ನು ಸದುಪಯೋಗಪಡಿಸಿಕೊಳ್ಳಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (ಬಿಸಿಎಂ) ಏಕ ಕಡತ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ ರಾಜ್ಯಪಾಲರ ಆದೇಶದಂತೆ, ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು 2025ರ ಜೂನ್ 26 ರಂದು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ 28 ವಿದ್ಯಾರ್ಥಿನಿಲಯಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಕಡಕ್ ಆದೇಶ ನೀಡಿದ್ದರು. ಈ ಆದೇಶದ ಅನ್ವಯ ಬಂಟ್ವಾಳ ತಾಲೂಕಿನ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಖಾಲಿ ಕಟ್ಟಡವು ಈಗಾಗಲೇ ಹಸ್ತಾಂತರಗೊಂಡು, ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಆದರೆ, ಮಂಗಳೂರಿನ ಗುಂಡಳಿಕೆ ಹಾಗೂ ಶರ್ಬತ್‌ಕಟ್ಟೆಯಲ್ಲಿರುವ ಕೆಪಿಟಿ ಹಾಸ್ಟೆಲ್ ಕಟ್ಟಡಗಳು ಮಾತ್ರ ಇಂದಿಗೂ ಹಸ್ತಾಂತರಗೊಳ್ಳದೆ ಪಾಳು ಬಿದ್ದಿವೆ. ಈ ಗಂಭೀರ ಸಾರ್ವಜನಿಕ ಮತ್ತು ಶೈಕ್ಷಣಿಕ ಸಮಸ್ಯೆಯನ್ನು ಕೈಗೆತ್ತಿಕೊಂಡಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಾದ ಎಬಿವಿಪಿ, ಎನ್‌ಎಸ್‌ಯುಐ ಹಾಗೂ ಸರ್ವಕಾಲೇಜು ವಿದ್ಯಾರ್ಥಿ ಪರಿಷತ್ ಈಗ ಪ್ರತ್ಯೇಕವಾಗಿ ಬೃಹತ್ ಹೋರಾಟಕ್ಕೆ ಸಿದ್ಧತೆ ನಡೆಸಿವೆ.
ಜೂನ್ 22ರಂದು ಜಿಲ್ಲಾಧಿಕಾರಿಗಳು ಕೆಪಿಟಿ ಪ್ರಾಂಶುಪಾಲರಿಗೆ ಅಧಿಕೃತ ಆದೇಶ ಪತ್ರದ ಮೂಲಕ ಕಟ್ಟಡಗಳನ್ನು ತಕ್ಷಣ ಹಸ್ತಾಂತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳ ಹಠಮಾರಿ ತನ ಹಾಗೂ ಉಡಾಫೆ ಎಷ್ಟರ ಮಟ್ಟಿಗಿದೆ ಎಂದರೆ, ಅವರು ಸ್ವತಃ ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡಿಲ್

ವಿದ್ಯಾರ್ಥಿ ನಿಲಯಕ್ಕೆ ಮಾತ್ರ ಕಟ್ಟಡ ಮೀಸಲು!
ಕೆಪಿಟಿ ಅಧಿನಕ್ಕೆ ಬಂದರೆ ಕಾನೂನು ತೊಡಕು
ಗುಂಡಳಿಕೆ ಹಾಗೂ ಶರ್ಬತ್‌ಕಟ್ಟೆಯಲ್ಲಿರು ಕಟ್ಟಡಗಳು ಹಾಸ್ಟೆಲ್ ಕಟ್ಟಡ ಎಂದೇ ಪಾಲಿಕೆ ಹಾಗೂ ಇತರೆ ದಾಖಲೆಯಲ್ಲಿ ನಮೂದುಗೊಂಡಿದೆ. ವಿದ್ಯಾರ್ಥಿ ನಿಲಯಕ್ಕೆಂದೇ ಕಟ್ಟಡದ ವಿನ್ಯಾಸ ಹಾಗೂ ಮೂಡ ಅನುಮತಿಗಳನ್ನೂ ಪಡೆದು ನಿರ್ಮಿಸಲಾಗಿದೆ. ಈ ಕಾರಣಕ್ಕಾಗಿ ಇಲ್ಲಿ ಹಾಸ್ಟೆಲ್ ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಯೋಜನೆಗಳಾಗಲಿ, ತರಬೇತಿ ಕೇಂದ್ರವಾಗಿ ರೂಪಿಸಲು ಕಾನೂನು ತೊಡಕು ಇದೆ. ಈ ಎಲ್ಲಾ ತೊಡಕುಗಳ ಅರಿವಿದ್ದರೂ ಜಿದ್ದಿಗೆ ಬಿದ್ದ ಕೆಪಿಟಿ ಸಂಸ್ಥೆ ಸದ್ಯಕ್ಕೆ ಕುಡುಕ ಮತ್ತು ಮಂಗಳಮುಖಿಯರಿಗೆಂದೇ ಮೀಸಲಿಟ್ಟಂತೆ ಇದೆ.
-----------------
ನಾನು ಪ್ರಭಾರ ನೆಲೆಯಲ್ಲಿ ಕೆಲವು ದಿನದ ಹಿಂದೆ ಅಧಿಕಾರ ಸ್ವೀಕರಿಸಿದ್ದೇನೆ. ಈ ಹಿಂದಿನ ಪ್ರಾಚಾರ್ಯರು ಜಿಲ್ಲಾಧಿಕಾರಿ ಪತ್ರಕ್ಕೆ ಉತ್ತರಿಸಿರುವ ಬಗ್ಗೆ ಮಾಹಿತಿ ಲಭ್ಯ, ರಾಜ್ಯ ಸರ್ಕಾರದ ಸೆಂಟರ್ ಆಫ್ ಎಕ್ಸಲೆಂಟ್ ಯೋಜನೆಗೆ ಈ ಕಟ್ಟಡವನ್ನು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ ಎಂದರೆ ನಾವೂ ಸಿದ್ದ, ಮತ್ತೆ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ದೇಶನ ನೀಡಿದರೆ ಈಬಗ್ಗೆ ಮುಂದಿನ ನಿರ್ದಾರ ಕೈಗೊಳ್ಳಲಾಗುವುದು.
-ನಾರಾಯಣ ಸ್ವಾಮಿ. ಆರ್, ಪ್ರಾಚಾರ್ಯರು
ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್-ಮಂಗಳೂರು
------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net