

ಈಗಾಗಲೆ ರೋಟರಿ ಕ್ಲಬ್, ಸ್ವಚ್ಛ ಕಾರ್ಕಳ ಬ್ರಿಗೇಡ್, ಸ್ಥಳೀಯರ ಸಹಯೋಗದಲ್ಲಿ ಈ ಭಾಗದಲ್ಲಿ ಆಗಾಗ ಸ್ವಚ್ಛತಾ ಕಾರ್ಯ, ಹೂಳು ತೆಗೆಯುವ ಕೆಲಸ ನಡೆದಿದೆ. ಈ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿ ಕೆರೆ ಪುನಃಶ್ಚೇತನಕ್ಕೆ ಕ್ರಮ ವಹಿಸಬೇಕು.
ನಾಗರಬಾವಿ ಕೆರೆ ಕೇವಲ ಒಂದು ನೀರಿನ ಮೂಲವಲ್ಲ, ಅದು ಕಾರ್ಕಳದ ಪರಂಪರೆಯ ಸಂಕೇತ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪುರಸಭೆ ಎಚ್ಚೆತ್ತುಕೊಂಡು ಈ ಕೂಡಲೇ ಕೆರೆ ಅಭಿವೃದ್ಧಿಗೆ ಮುಂದಾಗಬೇಕಿದೆ.