ಸಂಸ್ಕಾರಕ್ಕೆ ಕಲೆಗಳ ಕೊಡುಗೆ

ಚಾತುರ್ಮಾಸ್ಯ ಮಂಗಲೋತ್ಸವ
 ಎಡನೀರು ಶ್ರೀಗಳ ಚಾತುರ್ಮಾಸ್ಯ ಮಂಗಲೋತ್ಸವದಲ್ಲಿ ಹಿರಿಯ ಸಂಗೀತ ವಿದ್ವಾಂಸ ಕಲ್ಮಾಡಿ ಸದಾಶಿವ ಆಚಾರ್ಯ ಅವರನ್ನು ಶ್ರೀಗಳು ಸನ್ಮಾನಿಸಿದರು. ಪ್ರಮುಖರಾದ ಹರೀಶ್ ಬಳಂತಿಮೊಗರು, ಡಾ.ಟಿ.ಶ್ಯಾಂ ಭಟ್, ನೀರ್ನಳ್ಳಿ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಎಡನೀರು ಶ್ರೀಗಳ ಚಾತುರ್ಮಾಸ್ಯ ಮಂಗಲೋತ್ಸವದಲ್ಲಿ ಹಿರಿಯ ಸಂಗೀತ ವಿದ್ವಾಂಸ ಕಲ್ಮಾಡಿ ಸದಾಶಿವ ಆಚಾರ್ಯ ಅವರನ್ನು ಶ್ರೀಗಳು ಸನ್ಮಾನಿಸಿದರು. ಪ್ರಮುಖರಾದ ಹರೀಶ್ ಬಳಂತಿಮೊಗರು, ಡಾ.ಟಿ.ಶ್ಯಾಂ ಭಟ್, ನೀರ್ನಳ್ಳಿ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
Published on: 

ಕಾಸರಗೋಡು: ಧರ್ಮ ಮತ್ತು ಕಲೆ ನಮ್ಮ ದೇಶದ ಸಂಸ್ಕೃತಿಯ ಭದ್ರ ಬುನಾದಿಯಾಗಿದ್ದು, ಇವು ಜನರನ್ನು ಸಚ್ಚಾರಿತ್ರೃವಂತ ಸಂಸ್ಕಾರಗಳಿಂದ ಕೂಡಿದ ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಎಡನೀರು ಮಠದಲ್ಲಿ 6ನೇ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ 60 ದಿನ ನಡೆದ ಕನ್ನಡ ಸಾಂಸ್ಕೃತಿಕ ಕಲೋತ್ಸವದ ಮಂಗಲೋತ್ಸವದಲ್ಲಿ ಆಶೀರ್ವಚನ ನೀಡಿದರು.

ಸಂಸದ ರಾಜಮೋಹನ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಗಳ ಪೀಠಾರೋಹಣ ವರ್ಧಂತಿ ಅಂಗವಾಗಿ ಕಾಸರಗೋಡಿನಲ್ಲಿ ಸತತ 50 ವರ್ಷಗಳಿಂದ ಸಂಗೀತ ಶಿಕ್ಷಣ ಧಾರೆಯೆರೆದ ಹಿರಿಯ ಸಂಗೀತ ವಿದ್ವಾಂಸ ಕಲ್ಮಾಡಿ ಸದಾಶಿವ ಆಚಾರ್ ದಂಪತಿ, ಚಾತುರ್ಮಾಸ್ಯ ಆಚರಣಾ ಅವಧಿಯಲ್ಲಿ ನಿರಂತರ 60 ದಿನಗಳ ಭಜನಾ ಸೇವೆ ಸಂಯೋಜಿಸಿದ ವೀಣಾ ಕಡಮಣ್ಣಾಯ ದಂಪತಿಯನ್ನು ಶ್ರೀಗಳು ಗೌರವಿಸಿದರು.

ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಬಳಂತಿಮೊಗರು, ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಾ.ಟಿ.ಶ್ಯಾಂ ಭಟ್, ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಉಪಸ್ಥಿತರಿದ್ದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಕಯ್ಯೂರು ನಾರಾಯಣ ಭಟ್ ನಿರೂಪಿಸಿದರು.

ಕೊಡುಗೆ ಹಸ್ತಾಂತರ, ಯಕ್ಷಗಾನ

ಎಡನೀರು ಶ್ರೀಗಳ 6ನೇ ಚಾತುರ್ಮಾಸ್ಯ ನೆನಪಿಗಾಗಿ ಕಾಸರಗೋಡು ಸೇವಾ ಭಾರತಿಯ ಸಾಮಾಜಿಕ ಸೇವಾ ಘಟಕಕ್ಕೆ ಮೂರು ವೀಲ್‌ಚೇರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ ನೀಡಲಾಯಿತು. ಡಾ.ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನದಿಂದ ಯಕ್ಷಗಾನ ಬಯಲಾಟ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net