ಕೇಂದ್ರದ ಸದಸ್ಯರಾದ ರಾಜೀವಿ ಹಾಗೂ ಚೇತನ ಅನಿಸಿಕೆ ವ್ಯಕ್ತಪಡಿಸಿದರು. ಕುಂಬ್ರ ವಲಯ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಗತಿಪರ ಕೃಷಿಕ ಹೊನ್ನಪ್ಪ ಗೌಡ ಕೋಡಿಬೈಲ್ ಅತಿಥಿಗಳಾಗಿದ್ದರು. ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ. ಸ್ವಾಗತಿಸಿದರು. ಕುಂಬ್ರ ವಲಯ ಮೇಲ್ವಿಚಾರಕಿ ಸುನೀತಾ ಶೆಟ್ಟಿ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ರೈ ಪರ್ಪುಂಜ, ರಾಜೀವಿ ಕುಂಬ್ರ, ಹರಿಹರ ಕೋಡಿಬೈಲು, ಅರುಣ್ ರೈ ಬಿಜಳ, ಸುಧಾಕರ ರೈ ಕುಂಬ್ರ, ಪಾರ್ವತಿ, ಸುರೇಖಾ ಮತ್ತಿತರರಿದ್ದರು.