ಮೊಹಮ್ಮದ್ ಗುಲ್ ಝಹೀಮ್ ಬಂಧಿತ ಆರೋಪಿ. ಕಂಕನಾಡಿ ನಗರ ಠಾಣೆ ಪೊಲೀಸರು ಗಸ್ತು ಕರ್ತವ್ಯ ದಲ್ಲಿರುವಾಗ ಬಜಾಲ್ ವೀರ ನಗರ ಕಡೆಗೆ ಹೋಗುವ ಪೇರ್ಲ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಕುಳಿತ್ತಿದ್ದಾತ ಪೊಲೀಸ್ ವಾಹನ ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ. ಪೊಲೀಸರು ಆತನನ್ನು ಹಿಡಿದು, ಪರಿಶೀಲಿಸಿದಾಗ 65.78 ಗ್ರಾಂ ತೂಕದ, 6,57,800 ರೂ. ಅಂದಾಜು ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ. ಜತೆಗೆ 25 ಸಣ್ಣ ಜಿಪ್ ಲಾಕ್ ಕವರ್ ಗಳು, ಬ್ಯಾಟರಿ ಚಾಲಿತ ತೂಕ ಮಾಪನ ಯಂತ್ರ, ಎಲೆಕ್ಟ್ರಿಕ್ ಸ್ಕೂಟರ್ ಸೇರಿ 8,08,100 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.