ಮರಳು ತೆರವಿಗೆ ಸುಪ್ರೀಂ ಬ್ರೇಕ್!

ಉನ್ನತಾಧಿಕಾರ ಸಮಿತಿಯಿಂದ ಶಿಫಾರಸು
ಮರಳು ತೆರವಿಗೆ ಸುಪ್ರೀಂ ಬ್ರೇಕ್!
Published on: 

ವಿಜಯವಾಣಿ ಸುದ್ದಿಜಾಲ ಕುಂಬಳೆ

ರಾಜ್ಯದ 17 ನದಿಗಳಲ್ಲಿ ಶೇಖರಣೆಯಾಗಿರುವ ಮರಳನ್ನು ತೆರವುಗೊಳಿಸಲು ಸರ್ಕಾರ ಕೈಗೊಂಡಿದ್ದ ಕ್ರಮಗಳಿಗೆ ಹಿನ್ನಡೆಯಾಗಿದೆ. ನದಿಗಳಿಂದ ಮರಳು ತೆಗೆಯುವುದನ್ನು ಹಂತ-ಹಂತವಾಗಿ ಸ್ಥಗಿತಗೊಳಿಸಿ, ಪರ್ಯಾಯವಾಗಿ ಅಣೆಕಟ್ಟುಗಳಲ್ಲಿ ಶೇಖರಣೆಯಾಗಿರುವ ಮರಳನ್ನು ತೆಗೆಯಲು ಆದ್ಯತೆ ನೀಡುವಂತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ಶಿಫಾರಸು ವಾಡಿದೆ. ಇದರಿಂದ ಕಾಸರಗೋಡು ಸೇರಿದಂತೆ ರಾಜ್ಯದ ನದಿಗಳಲ್ಲಿ ಮರಳು ಗಣಿಗಾರಿಕೆ ಆರಂಭಿಸುವ ಪ್ರಕ್ರಿಯೆ ಅನಿಶ್ಚಿತತೆಗೆ ಸಿಲುಕಿದೆ.

ಚಂದ್ರಪ್ರಕಾಶ್ ಗೋಯಲ್ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಈ ಕುರಿತು ವರದಿ ಸಲ್ಲಿಸಿದೆ. ಮುಂದಿನ ಮೂರು ವಷರ್ಗಳಲ್ಲಿ ನದಿಗಳಿಂದ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸಮಿತಿಯು ವರದಿಯಲ್ಲಿ ಶಿಫಾರಸು ವಾಡಿದೆ. ನದಿ ಮರಳಿನ ಬದಲಾಗಿ ಅಣೆಕಟ್ಟುಗಳಿಂದ ಲಭ್ಯವಾಗುವ ಮರಳು ಕೂಡ ಬಿಐಎಸ್ ಗುಣಮಟ್ಟ ಹೊಂದಿದ್ದು, ನಿರ್ವಾಣ ಕಾಮಗಾರಿಗಳಿಗೆ ಯೋಗ್ಯವಾಗಿದೆ ಎಂದು ಸಮಿತಿ ತಿಳಿಸಿದೆ.

ಹೂಳು, ಮರಳು ತೆರವಿಗೆ 10 ವಷರ್ಗಳ ಯೋಜನೆ

ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು 10 ವಷರ್ಗಳ ದೀರ್ಘಾವಧಿ ಯೋಜನೆ ರೂಪಿಸುವಂತೆ ಸಮಿತಿ ಸಲಹೆ ನೀಡಿದೆ. 15 ವಷರ್ಕ್ಕಿಂತ ಹಳೆಯದಾದ ಅಣೆಕಟ್ಟುಗಳನ್ನು ಗುರುತಿಸಿ, ಅಲ್ಲಿಂದ ಪ್ರತಿವಷರ್ ಮರಳು ತೆಗೆಯಬೇಕು. ಮುಂದಿನ ಮೂರು ವಷರ್ಗಳಲ್ಲಿ ಇದಕ್ಕೆ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭವಾಗಬೇಕು ಮತ್ತು ತೆಗೆದ ಮರಳನ್ನು ಪಾರದರ್ಶಕವಾಗಿ ವಾರಾಟ ವಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಮರಳಿನ ಅಭಾವ ನೀಗುವುದರ ಜತೆಗೆ, ಅಣೆಕಟ್ಟುಗಳ ನೀರು ಸಂಗ್ರಹಣಾ ಸಾಮರ್ಥ್ಯವೂ ಹೆಚ್ಚಾಗಲಿದೆ ಎಂಬುದು ಸಮಿತಿಯ ಅಭಿಪ್ರಾಯ.

ಪ್ರವಾಹ ಭೀತಿ ಮತ್ತು ‘ಸ್ಯಾಂಡ್ ಆಡಿಟ್’ ವರದಿ

ನದಿಗಳಲ್ಲಿ ಅತಿಯಾಗಿ ಮರಳು ಶೇಖರಣೆಯಾಗುವುದರಿಂದ ನದಿ ಪಾತ್ರದ ಆಳ ಕಡಿಮೆಯಾಗಿ, ನೀರಿನ ಸಹಜ ಹರಿವಿಗೆ ಅಡ್ಡಿಯಾಗುತ್ತಿದೆ. ಇದು ಮಳೆಗಾಲದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಅಧ್ಯಯನ ವರದಿಗಳು ಎಚ್ಚರಿಸಿದ್ದವು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ನಡೆಸಿದ ‘ಸ್ಯಾಂಡ್ ಆಡಿಟ್’ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ಕಾಸರಗೋಡು ಜಿಲ್ಲೆಯ ಉಪ್ಪಳ, ಮೊಗ್ರಾಲ್ ಮತ್ತು ಚಂದ್ರಗಿರಿ ನದಿಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗಿತ್ತು. ಇದಕ್ಕಾಗಿ ಸ್ಥಳೀಯವಾಗಿ ಸಿದ್ಧತೆಗಳು ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಸಮಿತಿಯ ಹೊಸ ಶಿಫಾರಸು ಹೊರಬಿದ್ದಿದೆ.

ಕೇಂದ್ರ ಸರ್ಕಾರದ ನಿಲುವೇ ನಿರ್ಣಾಯಕ

ನದಿ ಮರಳು ಗಣಿಗಾರಿಕೆಗೆ ರಾಜ್ಯದ ಪರಿಸರ ಮತ್ತು ಭೂವಿಜ್ಞಾನ ಇಲಾಖೆಗಳ ಅನುಮತಿ ಜತೆಗೆ, ಸುಪ್ರೀಂ ಕೋರ್ಟ್ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮತಿಯನ್ನೂ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಮರಳು ಗಣಿಗಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಳೆಯುವ ಮುಂದಿನ ನಿಲುವಿನ ಮೇಲೆ ರಾಜ್ಯದ ನದಿಗಳ ಮರಳು ತೆರವು ಭವಿಷ್ಯ ನಿರ್ಧಾರವಾಗಲಿದೆ.