_1762865453658.webp?w=480&auto=format%2Ccompress&fit=max)
_1762865453658.webp?w=480&auto=format%2Ccompress&fit=max)
ಬದಿಯಡ್ಕ: ಭಾರತೀನಗರ ಸುನಾದ ಸಂಗೀತ ಕಲಾಶಾಲೆಯ ಸುನಾದ ಸಂಗೀತೋತ್ಸವ ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆರಂಭವಾಯಿತು.
ನಿವೃತ್ತ ಶಿಕ್ಷಕ ಶ್ಯಾಮ ಭಟ್ ವಳಕ್ಕುಂಜ ಹಾಗೂ ಜಯಕುಮಾರಿ ದಂಪತಿ ಉದ್ಘಾಟಿಸಿದರು. ಶ್ಯಾಮಪ್ರಸಾದ ಕಬೆಕ್ಕೋಡು, ಸಂಗೀತ ಗುರು ವಾಣಿಪ್ರಸಾದ್ ಕಬೆಕ್ಕೋಡು, ನಿವೃತ್ತ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಭಟ್ ಮೊದಲಾದವರಿದ್ದರು.
ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನೆ, ಕರ್ನಾಟಕ ಶಾಸ್ತ್ರಿಯ ಸಂಗೀತ ಗಾಯನ ನಡೆಯಿತು. ಸಂಜೆ ಕಲಾವಿದ ವಿವೇಕ್ ಸದಾಶಿವಮ್ ಅವರಿಂದ ಪ್ರಧಾನ ಕಛೇರಿ ನಡೆಯಿತು. ವಯಲಿನ್‌ನಲ್ಲಿ ಟ್ರಿವೇಂಡ್ರಂ ಎನ್.ಸಂಪತ್, ಮದಂಗದಲ್ಲಿ ಕಾಂಚನಾ ಎ.ಈಶ್ವರ ಭಟ್, ಟಂನಲ್ಲಿ ಶರತ್ ಕೌಶಿಕ್ ಮೈಸೂರು ಸಹಕರಿಸಿದರು.