ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
hanging
hanging
Published on: 

ಕುಂದಾಪುರ: ಚಿಟ್‌ಫಂಡ್, ಕಂಪ್ಯೂಟರ್ ಸ್ಟೇಶನರಿ ಮಾರಾಟ ಮಾಡಿಕೊಂಡಿದ್ದ ಕಟ್‌ಬೇಲ್ತೂರು ಗ್ರಾಮದ ಜಾಲಾಡಿ ಜನತಾ ಹೈಸ್ಕೂಲ್ ಸಮೀಪದ ನಿವಾಸಿ ಪ್ರಸಾದ್ ಬಿ.(57) ಎಂಬುವರು ಮನೆಯ ಬೆಡ್ ರೂಮ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಪ್ರಸಾದ್ ಅ.24ರಂದು ಬೆಳಗ್ಗೆ ಕುಂದಾಪುರಕ್ಕೆ ಹೋಗಿ ಬಂದವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೆಡ್ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ರತಿದೇವಿ ನೀಡಿ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net