ಸ್ವಂತ ಪರಿಶ್ರಮದಿಂದ ಉದ್ಯಮದಲ್ಲಿ ಯಶಸ್ಸು

  ರುಡ್‌ಸೆಟ್ ಶಿಬಿರಾರ್ಥಿಗಳಿಗೆ  ಪ್ರಸಾದ್ ಬಿ.ಎಸ್. ಪ್ರಮಾಣಪತ್ರ ವಿತರಿಸಿದರು. ಬಿ.ಪಿ.ವಿಜಯ ಕುಮಾರ್, ಗುರುರಾಜ್ ಕೆ.ಎಸ್. ಮೊದಲಾದವರಿದ್ದರು.
ರುಡ್‌ಸೆಟ್ ಶಿಬಿರಾರ್ಥಿಗಳಿಗೆ ಪ್ರಸಾದ್ ಬಿ.ಎಸ್. ಪ್ರಮಾಣಪತ್ರ ವಿತರಿಸಿದರು. ಬಿ.ಪಿ.ವಿಜಯ ಕುಮಾರ್, ಗುರುರಾಜ್ ಕೆ.ಎಸ್. ಮೊದಲಾದವರಿದ್ದರು.
Published on

ಬೆಳ್ತಂಗಡಿ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಬೇರೆಯವರ ಬೆಂಬಲ ನಿರೀಕ್ಷಿಸದೆ ಸ್ವಂತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ಹೇಳಿದರು.

ಉಜಿರೆ ಸಿದ್ಧವನ ರುಡ್‌ಸೆಟ್ ಸಂಸ್ಥೆಯಲ್ಲಿ, ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಸರ್ವಿಸ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತರಬೇತಿಯ ಅತಿಥಿ ಉಪನ್ಯಾಸಕ ಗುರುರಾಜ್ ಕೆ.ಎಸ್., ಉಪನ್ಯಾಸಕ ಕೆ.ಕರುಣಾಕರ ಜೈನ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಸುನೀಲ್ ಜಿ. ಸ್ವಾಗತಿಸಿದರು. ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಾದ ಜಗದೀಶ್ ಹಾಗೂ ಅಶೋಕ್ ತರಬೇತಿಯ ಅನುಭವ ಹಂಚಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net