ಈಡೇರದ ಮೇಲ್ದರ್ಜೆ ಕನಸು! : ಇಲ್ಲಗಳ ನಡುವೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ.
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ.
Published on

ಪ್ರಮುಖ ಮುಖ್ಯಾಂಶಗಳು

  • ತುರ್ತು ಸಂದರ್ಭ ತಪ್ಪದ ಅಲೆದಾಟ
  • ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆ ಕನಸು
  • 24 ಗಂಟೆಯೂ ಆರೋಗ್ಯ ಸೇವೆಗೆ ಬೇಡಿಕೆ

24 ಗಂಟೆ ಸೇವೆ ಇಲ್ಲ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡವಿದೆ. ಆದರೆ ಇದು ಇಂದಿಗೂ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. 24 ಗಂಟೆಯೂ ಆರೋಗ್ಯ ಸೇವೆ ಇಲ್ಲದೆ ಅಸೌಖ್ಯ, ಅಪಘಾತ ಸಂದರ್ಭದಲ್ಲಿ ಕೇವಲ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿ ದೂರದೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇಂದಿಗೂ ಇದೆ.

ಸ್ಪಂದನೆ ಅಗತ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತೆಯಾಗಬೇಕೆಂದು ಹಲವು ವರ್ಷಗಳಿಂದ ಡಾ.ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ರವಿ ಕಕ್ಕೆಪದವು ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ನಿರಂತರ ಮನವಿಗಳನ್ನು ಸಲ್ಲಿಸಿದರೂ ಬೇಡಿಕೆ ಮಾತ್ರ ಕನಸಾಗಿಯೇ ಉಳಿದಿದೆ ಎನ್ನುವುದು ಸಾರ್ವಜನಿಕರ ಅಸಮಾಧಾನ. ಇನ್ನಾದರೂ ಕುಕ್ಕೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24 ಗಂಟೆಯೂ ಆರೋಗ್ಯ ಸೇವೆ ನೀಡುವ ವ್ಯವಸ್ಥೆಯಾಗಬೇಕಿರುವುದು ಅತ್ಯವಶ್ಯಕ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ನಿಟ್ಟಿನಲ್ಲಿ ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಮತ್ತು ಸುಬ್ರಹ್ಮಣ್ಯದಲ್ಲಿ ಎಲ್ಲ ಸಮಯ ಸಂದರ್ಭದಲ್ಲೂ ಉತ್ತಮ ಆರೋಗ್ಯ ಸೇವೆಗಳನ್ನು ಕಲ್ಪಿಸುವಂತೆ ವ್ಯವಸ್ಥೆ ಮಾಡಲು ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಇನ್ನೊಮ್ಮೆ ಈ ಬಗ್ಗೆ ಮನವಿ ಸಲ್ಲಿಸಿ ಸಚಿವರ ಗಮನ ಸೆಳೆಯುತ್ತೇನೆ.

ಕುಕ್ಕೆಯಲ್ಲಿ 24 ಗಂಟೆ ಸೇವೆ ನೀಡುವ ಆಸ್ಪತ್ರೆ ಅಗತ್ಯ. ಇದಕ್ಕಾಗಿ ಹಲವು ಬಾರಿ ಮನವಿ ಮಾಡಲಾಗಿದೆ. ಸುಸಜ್ಜಿತ ಆಸ್ಪತ್ರೆ ಇಲ್ಲದೆ ಹಲವು ಪ್ರಾಣಹಾನಿ ಸಂಭವಿಸಿದೆ. ಅಪಘಾತ, ಅನಾರೋಗ್ಯ ಮುಂತಾದ ಕಾರಣದಿಂದ ತಕ್ಷಣದಲ್ಲಿ ಚಿಕಿತ್ಸೆ ಲಭಿಸದೆ ದೂರದೂರಿಗೆ ಕರೆದೊಯ್ಯುವಾಗ ಹಲವು ಅನಾಹುತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net