ಭಗವಂತನ ನಾಮಸ್ಮರಣೆಯಿಂದ ಜೀವನ ಔನತ್ಯ : ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ಅಗ್ರಹಾರದ ಅನಿರುದ್ಧ ತೀರ್ಥರ ಬೃಂದಾವನದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಪೂಜೆ ಸಮರ್ಪಿಸಿದರು.
ಅಗ್ರಹಾರದ ಅನಿರುದ್ಧ ತೀರ್ಥರ ಬೃಂದಾವನದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಪೂಜೆ ಸಮರ್ಪಿಸಿದರು.
Published on
ಮನುಷ್ಯನ ನಾಲಗೆಯಲ್ಲಿ ಮಾತು ಚಿಗುರಬೇಕಾದರೆ ಭಗವಂತನ ಅನುಗ್ರಹ ಬೇಕು. ಅಂತಹ ನಾಲಗೆಯಲ್ಲಿ ಭಗವಂತನ ನಾಮವನ್ನು ಉಚ್ಛಾರ ಮಾಡುವುದು ಶ್ರೇಯಸ್ಕರ. ಇದು ದೇವರ ಅನುಗ್ರಹದೊಂದಿಗೆ ಬದುಕಿನ ಉದ್ದೀಪನಕ್ಕೆ ದಾರಿದೀಪವಾಗುತ್ತದೆ. ಸಂಕೀರ್ತನೆಯಿಂದ ಬದುಕು ಸಾರ್ಥಕವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿಗಳ 47ನೇ ಟಿಕೋತ್ಸವ ಸುಧಾಮಂಗಲ ವಿಶ್ವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಂಕೀರ್ತನೋತ್ಸವ

ಡಾ.ಬಿ.ಎನ್.ವಿಜಯೀಂದ್ರ ಆಚಾರ್ಯ ಮೈಸೂರು ಭಜನೆಯಲ್ಲಿ ದಾಸ ಸಾಹಿತ್ಯ ಪರಂಪರೆಯ ಮಹತ್ವ ಎಂಬ ವಿಷಯವಾಗಿ ಪ್ರವಚನ ನೀಡಿದರು. ಬಳಿಕ ಭಜನೆ ಕುಣಿತ ಭಜನೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಭಜನಾ ಸಂಕೀರ್ತನೋತ್ಸವ ನೆರವೇರಿತು. ಬಳಿಕ ಹರಿದಾಸ ಸಾಹಿತ್ಯದ ಬಗ್ಗೆ ಗೋಷ್ಠಿ ಮತ್ತು ತರಬೇತಿಯನ್ನು ಕೀರ್ತನಾಕಾರ ಮೈಸೂರು ರಾಮಚಂದ್ರಾಚಾರ್ಯ ನಡೆಸಿಕೊಟ್ಟರು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಮಠದ ದಿವಾನ ಸುದರ್ಶನ ಜೋಯಿಸ, ಪ್ರಮುಖರಾದ ಸಗ್ರಿ ಆನಂದ ತೀರ್ಥ, ಕಿರಣ ಆಚಾರ್ಯ, ಕೆ.ಯಜ್ಞೇಶ್ ಆಚಾರ್, ಗಣೇಶ್ ಪರ್ವತಮುಖಿ ಮತ್ತಿತರರಿದ್ದರು. ಭಜನಾ ತರಬೇತಿ ನಡೆಯಿತು.

ಹರಿಸಂಕೀರ್ತನಾ ಪಾದಯಾತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net