ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಎಲ್ಲರೂ 112 ಸಂಖ್ಯೆಯನ್ನು ಮೊಬೈಲ್‌ನಲ್ಲಿ ಸೇವ್ ಮಾಡಿ, ತುರ್ತು ಸಂದರ್ಭ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಲು ಅನುಕೂಲಕರ. ಹೆಲ್ಮೆಟ್ ಹಾಕದೆ ಪ್ರಯಾಣಿಸಿದಲ್ಲಿ ಹಾಗೂ ಅಪ್ರಾಪ್ತರಿಗೆ ವಾಹನ ನೀಡಿದಲ್ಲಿ ಪಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮದೊಂದಿಗೆ ದಂಡ ವಿಧಿಸಲಾಗುವುದು ಎಂದು ಸುಬ್ರಹ್ಮಣ್ಯ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು.
ಮಂಗಗಳ ಹಾವಳಿ, ಮರಕತ ಅಣೆಕಟ್ಟು ಸಮಸ್ಯೆ, ಪಶು ಇಲಾಖೆ ಕಟ್ಟಡ, ಸರ್ಕಾರಿ ಜಾಗ ಒತ್ತುವರಿ, ಅಪೌಷ್ಟಿಕತೆ ಬಗ್ಗೆ, ಎಂಟನೇ ತರಗತಿ ಸೇರುವಾಗ ಇಲ್ಲದ ಅಂಕಗಳ ಮಾನದಂಡ ಪ್ರಥಮ ಪಿಯುಗೆ ಸೇರುವಾಗ ಯಾಕಿದೆ? ದೂರು ನೀಡಿದರೂ ಅನಧಿಕೃತ ಅಂಗಡಿಗಳ ತೆರವು ಯಾಕಿಲ್ಲ ಇತ್ಯಾದಿ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಉಪ ವಲಯಾರಣ್ಯಧಿಕಾರಿ ಅಪೂರ್ವ ಅಚ್ರಪ್ಪಾಡಿ, ಆರೋಗ್ಯ ಇಲಾಖೆಯ ಡಾ.ರಶ್ಮಿ, ಮೆಸ್ಕಾಂ ಇಲಾಖೆಯ ಚಿದಾನಂದ ಕನ್ನಡ್ಕ, ಪಶುಪಾಲನಾ ಇಲಾಖೆಯ ಡಾ.ಮಲ್ಲಿಕಾ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ವಿಜಯಾ, ಕಂದಾಯ ಇಲಾಖೆಯ ಬಸವರಾಜ್, ಶಿಕ್ಷಣ ಇಲಾಖೆಯ ಉದಯ ಕುಮಾರ್ ಇಲಾಖಾ ಮಾಹಿತಿ ನೀಡಿದರು.