

ಕಿನ್ನಿಗೋಳಿ: ಪುನರೂರು ಬಳಿ ಎರಡು ದಿನಗಳಿಂದ ಸಾರ್ವಜನಿಕರಿಗೆ ಹೆಜ್ಜೇನು ಕಾಟ ನೀಡುತ್ತಿದ್ದು, ಸೋಮವಾರ ದಾಳಿ ಮಾಡಿ ಪರಿಣಾಮ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುನರೂರು ನಿವಾಸಿ ಮುಬಾರಕ್, ಚರಣ್ ದೇವಾಡಿಗ, ಹೇಮಂತ್ ದೇವಾಡಿಗ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ ಹಾಲು ಕೊಂಡು ಹೋಗುವ ದಿನೇಶ್ ಅವರನ್ನು ಹೆಜ್ಜೇನು ಅಟ್ಟಾಡಿಸಿಕೊಂಡು ಬಂದಿತ್ತು. ಅವರು ಸ್ವಲ್ಪದರಲ್ಲಿ ಪಾರಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ದಿನೇಶ್ ರಾವ್ ಪುನರೂರು ತಿಳಿಸಿದ್ದಾರೆ.