ಕಾಸರಗೋಡು ನಿವಾಸಿ ಮಹಮ್ಮದ್ ಇಶಾಮ್ ಅಲಿಯಾಸ್ ಪಮೀಜ್, ತ್ರಿಶ್ಯೂರ್ ಚಾವಕ್ಕಾಡ್ ನಿವಾಸಿ ಅಮಲ್ ಹಾಗೂ ಕೊಲ್ಲಂ ನಿವಾಸಿ ಅನ್‌ಸೀಲ್ ಬಂಧಿತರು. ಕಾಸರಗೋಡಿನಲ್ಲಿ ಟಿಪ್ಪರ್‌ಗೆ ಡಿಕ್ಕಿಯಾಗಿದ್ದ ಬೈಕ್, ನಂತರ ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಹಿಂಬಾಲಿಸಿ ಸೆರೆಹಿಡಿದಿದ್ದರು. ತಪಾಸಣೆ ನಡೆಸಿದಾಗ ಬೈಕ್ ವಾರಾಪುಳಂ ಚಿರಪ್ಪಾಡಂ ನಿವಾಸಿ ಸೂಫಲಿ ಎಂಬುವರ ಮನೆ ಸನಿಹದ ಶೆಡ್ಡಿನಿಂದ ಡಿ.9ರಂದು ಕಳವಾಗಿತ್ತು ಎನ್ನಲಾಗಿದೆ. ಅಮಲ್ ಮತ್ತು ಅನ್‌ಸೀಲ್ ಕಳವುಗೈದ ಬೈಕನ್ನು ಕಾಸರಗೋಡು ನಿವಾಸಿ ಇಷಾಮ್‌ಗೆ ಹಸ್ತಾಂತರಿಸಿದ್ದರು.