ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜ.24ರಂದು ಸಂಜೆ ಗುಂಡೇಟಿನಿಂದ ಬಾಲಕ ಮೃತಪಟ್ಟಟಿರುವ ಪ್ರಕರಣ ಇನ್ನೂ ಗೊಂದಲದ ಗೂಡಾಗಿಯೇ ಇದೆ. ಈ ಮಧ್ಯೆ, ಬಾಲಕನ ಅಂತ್ಯಕ್ರಿಯೆ ಜ.25ರಂದು ರಾತ್ರಿ ಕಾಸರಗೋಡು ಪೆರ್ಲ ಏಣ್ಮಕಜೆಯ ತಾಯಿ ಮನೆಯಲ್ಲಿ ನಡೆದಿದೆ. ಈ ಮಧ್ಯೆ ಆಸ್ಪತ್ರೆಗೆ ದಾಖಲಾಗಿರುವ ಬಾಲಕನ ತಂದೆಗೆ ಶಸ್ತ್ರಚಿಕಿತ್ಸೆ ನಡೆದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.