ಅಡ್ಡೂರು ಅಲ್ ಬಿರ್ರ್ ಶಾಲೆ ಚಾಂಪಿಯನ್ : ಮೂಡುಬಿದಿರೆ, ಕೈಕಂಬ ಶಾಲೆಗಳು ರನ್ನರ್‌ಅಪ್

ರಾಜ್ಯಮಟ್ಟದ ಅಲ್ ಬಿರ್ರ‌್‌ ಶಾಲೆಗಳ ವಿಜ್ಞಾನ ಮೇಳ ಹಾಗೂ ಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯಮಟ್ಟದ ಅಲ್ ಬಿರ್ರ‌್‌ ಶಾಲೆಗಳ ವಿಜ್ಞಾನ ಮೇಳ ಹಾಗೂ ಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Published on

ಮೂಡುಬಿದಿರೆ: ಇಲ್ಲಿನ ಅಲ್ ಬಿರ್ರ್ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಅಲ್ ಬಿರ್ರ್ ಶಾಲೆಗಳ ವಿಜ್ಞಾನ ಮೇಳ ಹಾಗೂ ಕಲಾ ಸ್ಪರ್ಧೆಯಲ್ಲಿ ಅಡ್ಡೂರಿನ ಅಲ್ ಬಿರ್ರ್ ಶಾಲೆ ಚಾಂಪಿಯನ್, ಮೂಡುಬಿದಿರೆ ಅಲ್ ಬಿರ್ರ್ ಶಾಲೆ, ಕೈಕಂಬದ ಅಲ್ ಬಿರ್ರ್ ಶಾಲೆಗಳು ಜಂಟಿಯಾಗಿ ರನ್ನರ್‌ಅಪ್ ಪ್ರಶಸ್ತಿ ಪಡೆದಿದೆ.

ಅಂಗರಕರಿಯ ಸಯ್ಯದ್ ಅಕ್ರಮ್ ಅಲಿ ತಂಙಳ್ ದುವಾ ನೆರವೇರಿಸಿ ಸ್ಪರ್ಧೆ ಉದ್ಘಾಟಿಸಿದರು. ಮೂಡುಬಿದಿರೆ ಜುಮಾ ಮಸೀದಿ ಖತೀಬರಾದ ಶರೀಫ್ ದಾರಿಮಿ ಶುಭಹಾರೈಸಿದರು. ಅಲ್ ಬಿರ್ರ್ ವಿದ್ಯಾರ್ಥಿ ಝೈನುಲ್ ಆಬಿದೀನ್ ಕಿರಾಅತ್ ಪಠಿಸಿದರು.

ಅಲ್ ಬಿರ್ರ್ ಜಿಲ್ಲಾ ಸಂಯೋಜಕ ಶುಕೂರ್ ದಾರಿಮಿ ಕರಾಯ, ಆಜುಮ್ ಅಲ್ ಬಿರ್ರ್ ಇಂಟರ್‌ನ್ಯಾಶನಲ್ ಸ್ಕೂಲ್ ಕಾರ್ಯದರ್ಶಿ ಮಾಲಿಕ್ ಅಝೀಝ್, ಕೋಶಾಧಿಕಾರಿ ಇರ್ಫಾನ್, ಟ್ರಸ್ಟಿಗಳಾದ ಅಲ್ತಾಫ್ ಗಂಟಾಲ್ಕಟ್ಟೆ, ಶಮೀಮ್ ಅಳಿಯೂರು, ಮೂಡುಬಿದಿರೆ ಜುಮಾ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್, ಲಾಡಿ ಜುಮಾ ಮಸೀದಿ ಖತೀಬರಾದ ಫಾಯಿಝ್ ಫೈಝಿ, ಅಹಮದ್ ಹುಸೇನ್, ಗಫೂರ್ ಕೋಟೆಬಾಗಿಲು, ಅಶ್ರಫ್ ಮರೋಡಿ, ಶೇಕ್ ಮೋನು ಅಡ್ಡೂರು, ಅಬ್ದುಲ್ ಖಾದರ್ ಅಡ್ಡೂರು, ಮಜೀದ್ ಹಾಜಿ ಕಣ್ಣೂರ್, ಅಲ್ತಾಫ್ ಲೊರೆಟ್ಟೊಪದವು, ಶಾಫಿ ಪುತ್ತೂರು, ಬಾತಿಶ್ ಹಾಜಿ ಪುತ್ತೂರು, ಅಲ್ ಬಿರ್ರ್ ಕೇಂದ್ರ ಸಮಿತಿ ಮುಖಂಡರಾದ ನವಾಝ್ ವಯತಿಲ, ಫಿರೋಝ್ ಗಜ್ಜಲಿ, ಫಾಝಲುರ್ರಹ್ಮಾನ್, ಶಾಫಿರುದ್ದೀನ್ ಮತ್ತು ನಹೀಮ್, ಅಧ್ಯಾಪಕ ಸಫ್ವಾನ್ ಬಾಖವಿ, ಮುಸ್ತಫಾ ಫೈಝಿ ಕಿನ್ಯ, ಹಫೀಝ್ ಅನ್ಸಾರಿ, ಆರಿಫ್ ಕಮ್ಮಾಜೆ ಕೈಕಂಬ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net