ಶ್ರೀ ಮಲರಾಯ ದೈವಸ್ಥಾನ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ಬಂಡಿಕೊಟ್ಯ ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ ನಡೆಯಿತು. ಸತೀಶ್ ಕುಂಪಲ ಮಲರಾಯ ಲತೀಶ್ ಯಾನೆ ಮುಂಡ ಪೂಜಾರಿ ಮತ್ತಿತರರಿದ್ದರು.
ಬಂಡಿಕೊಟ್ಯ ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ ನಡೆಯಿತು. ಸತೀಶ್ ಕುಂಪಲ ಮಲರಾಯ ಲತೀಶ್ ಯಾನೆ ಮುಂಡ ಪೂಜಾರಿ ಮತ್ತಿತರರಿದ್ದರು.
Published on
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಂದರ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು.
ಮಲರಾಯ ದೈವಸ್ಥಾನದ ಅರ್ಚಕ ಲತೀಶ್ ಯಾನೆ ಮುಂಡ ಪೂಜಾರಿ, ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್, ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಸುರೇಶ್ ಭಟ್ನಗರ, ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ದೈವಸ್ಥಾನದ ಪ್ರಮುಖರಾದ ರವೀಂದ್ರನಾಥ ರೈ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ, ಮಂಗಳೂರು ವಿವಿ ನಾರಾಯಣಗುರು ಅಧ್ಯಯನ ಪೀಠದ ಸದಸ್ಯ ಸತೀಶ್ ಕರ್ಕೇರ, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ದೀಪಕ್ ಪಿಲಾರು, ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಸುರೇಖ ಚಂದ್ರಹಾಸ್, ಉಳ್ಳಾಲಬೈಲು ವೈದ್ಯನಾಥ ಕ್ಷೇತ್ರದ ರವಿ ಸುವರ್ಣ, ಉಳ್ಳಾಲ ಲಕ್ಷ್ಮೀ ನರಸಿಂಹ ಕ್ಷೇತ್ರದ ಶ್ರೀಕರ ಕಿಣಿ, ಪ್ರಮುಖರಾದ ನಿಶಾನ್ ಪೂಜಾರಿ ಬಂಡಿಕೊಟ್ಯ, ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಪ್ರಮುಖ ಸುಂದರ ಉಳಿಯ, ಗೋಳಿಯಡಿ ಅಯ್ಯಪ್ಪ ಮಂದಿರದ ದಿನೇಶ್ ಉಳಿಯ, ವಳಚಿಲತ್ತಾಯ ದೈವಸ್ಥಾನದ ಶ್ರೀಕಾಂತ್ ಬಂಗೇರ, ಕೊಲ್ಯ ಬಿಲ್ಲವ ಸಮಾಜದ ವೇಣುಗೋಪಾಲ ಕೊಲ್ಯ, ಕೋರ್ದಬ್ಬು ದೈವಸ್ಥಾನದ ಚಂದ್ರಹಾಸ ಗುರಿಕಾರ, ಉಳ್ಳಾಲ ಗೋಪಾಲಕೃಷ್ಣ ಮಠದ ಜಯಂತ್ ಭಟ್, ಉಳ್ಳಾಲ ವೀರಭದ್ರ ಕ್ಷೇತ್ರದ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಮಧ್ವರಾಜ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತನಾಡಿದರು. ಉದಯ ಆರ್.ಕೆ.ಉಳ್ಳಾಲ್ ವಂದಿಸಿದರು. ನವನೀತ್ ಉಳ್ಳಾಲ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net