ವಂದೇ ಮಾತರಂ ಬ್ಯಾಂಕ್ ಏಳಿಗೆಗೆ ಸಹಕರಿಸಿ :ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಕರೆ

ಮೂಡುಬಿದಿರೆಯ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘ ಪ್ರವರ್ತಿತ ಸ್ವ-ಸಹಾಯ ಸಂಘಗಳ ವಾರ್ಷಿಕ ಕ್ರೀಡಾಕೂಟ ನವೀನ್ ಆರ್. ಪುತ್ರನ್ ಉದ್ಘಾಟಿಸಿದರು.
ಮೂಡುಬಿದಿರೆಯ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘ ಪ್ರವರ್ತಿತ ಸ್ವ-ಸಹಾಯ ಸಂಘಗಳ ವಾರ್ಷಿಕ ಕ್ರೀಡಾಕೂಟ ನವೀನ್ ಆರ್. ಪುತ್ರನ್ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಹಣಕಾಸು ವ್ಯವಹಾರ ನಿರ್ವಹಿಸುತ್ತಿರುವ ಬ್ಯಾಂಕಿಂಗ್ ಸಂಸ್ಥೆಯೊಂದು ತನ್ನ ಸದಸ್ಯರಿಗಾಗಿ ಪ್ರತಿ ವರ್ಷ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕ್ರೀಡೆಗೆ ಪ್ರೋತ್ಸಾಹ ನೀಡುವುದರ ಜತೆಗೆ ಬ್ಯಾಂಕಿನ ಅಭಿವೃದ್ಧಿಗೂ ಸಹಕರಿಸಬೇಕು ಎಂದು ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಆರ್. ಪುತ್ರನ್ ಕರೆ ನೀಡಿದರು.

ಮೂಡುಬಿದಿರೆಯ ಪ್ರೇರಣಾ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಮೂಡುಬಿದಿರೆಯ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘ ಪ್ರವರ್ತಿತ ಸ್ವ-ಸಹಾಯ ಸಂಘಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪ್ರೊ.ಎಂ. ವಾಸುದೇವ ಭಟ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದಕ್ಕಿಂತಲೂ ಕ್ರೀಡಾ ಮನೋಭಾವನೆ ಬೆಳೆಸುವುದು ಮುಖ್ಯ. ಈ ನೆಲೆಯಲ್ಲಿ ನಮ್ಮ ಬ್ಯಾಂಕ್, ಸ್ವ-ಸಹಾಯ ಸಂಘದ ಸದಸ್ಯರಿಗಾಗಿ ಕ್ರೀಡಾಕೂಟ ಆಯೋಜಿಸುತ್ತಿದೆ. ಸದಸ್ಯರು ಬಹುಮಾನ ಪಡೆಯುವುದೇ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಳ್ಳದೆ, ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು.

ಪ್ರೇರಣಾ ಶಾಲೆಯ ಸಂಚಾಲಕ, ವಂದೇ ಮಾತರಂ ಸೌಹಾರ್ದದ ನಿರ್ದೇಶಕ ಎಂ. ಶಾಂತರಾಮ ಕುಡ್ವ, ಬ್ಯಾಂಕಿನ ನಿರ್ದೇಶಕರು, ಸದಸ್ಯರು ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು. ವಂದೇ ಮಾತರಂ ಸೌಹಾರ್ದದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಸ್ವಾಗತಿಸಿದರು. ವಂದೇಮಾತರಂ ಸಿಬ್ಬಂದಿ ನಿಖಿತಾ ವಂದಿಸಿದರು. ರೂಪಾ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net