ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 34 ವಿಶೇಷ ಶಾಲೆಗಳಿಗೆ ಮಾತ್ರ 1982ರ ಅನುದಾನ ನೀತಿಯಂತೆ ಅನುದಾನ ದೊರೆಯುತ್ತಿದೆ. ರಾಜ್ಯ ಸಂಘದ ಹೋರಾಟದ ಫಲವಾಗಿ 2010-11ರಿಂದ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೂತನ ಅನುದಾನ ನೀತಿಯನ್ನು ಜಾರಿಗೆ ತಂದಿತು. ಅದು ಶಿಶು ಕೇಂದ್ರೀಕೃತ ಸಹಾಯಧನ ಯೋಜನೆ. ಇದು ಗೌರವ ಧನ ಮಾತ್ರ. 2010-11ರಲ್ಲಿ 6500 ರೂ. ಗೌರವಧನ ಇದ್ದುದು, 2014-15ರಲ್ಲಿ 13,500 ಬಳಿಕ 2022ರಲ್ಲಿ 20,250ಕ್ಕೆ ಏರಿಕೆಯಾಯಿತು. ಪ್ರಸ್ತುತ 166 ಶಾಲೆಗಳು ಈ ಸಹಾಯಧನ ಪಡೆಯುತ್ತಿದೆ. ಆದರೆ 1982ರ ಅನುದಾನ ನೀತಿಯನ್ವಯ ಅನುದಾನ ಪಡೆಯುತ್ತಿರುವ ಶಾಲೆಯ ಶಿಕ್ಷಕರು ಸುಮಾರು 60,000-80,000ರ ವರೆಗೆ ವೇತನ ಪಡೆಯುತ್ತಿದ್ದಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು.